Select Your Language

Notifications

webdunia
webdunia
webdunia
webdunia

ಇತಿಹಾಸದಲ್ಲೇ ಮೊದಲ ಬಾರಿಗೆ ಬಿಎಂಟಿಸಿ ಎಂಡಿ ವಿರುದ್ಧ ರಾಜ್ಯಪಾಲರಿಗೆ ದೂರು

webdunia
bangalore , ಸೋಮವಾರ, 30 ಜನವರಿ 2023 (15:14 IST)
ಬಿಎಂಟಿಸಿ ಎಂಡಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನೊಂದ ಚಾಲಕ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.ಬಿಎಂಟಿಸಿ ಎಂಡಿ ಸತ್ಯವತಿಯನ್ನ ಅಮಾನತ್ತು ಮಾಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು,ಅಧಿಕಾರಿಗಳ ಕಿರುಕುಳಕ್ಕೆ   ಬಿಎಂಟಿಸಿ ಚಾಲಕ ಬೇಸೆತ್ತಿದ್ದ.ರಾಜ್ಯಪಾಲರು ಸೇರಿದಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಆಯುಕ್ತರಿಗೆ ದೂರಿನ ಪತ್ರವನ್ನ ಚಾಲಕ ಬರೆದಿದ್ದ.ಸಂಸ್ಥೆಯಲ್ಲಿ ನಡೆಯುತ್ತಿರುವ  ಅಕ್ರಮದ ಬಗ್ಗೆ ದೂರು ನೀಡಿದ್ರೆ ದೂರು ನೀಡಿದ ಡ್ರೈವರ್ ಗೆ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.ಬಿಎಂಟಿಸಿ ಸಂಸ್ಥೆ ಸಾಕಷ್ಟು ನಷ್ಟದಲ್ಲಿದೆ. ಈ ನಷ್ಟಕ್ಕೆ ಮುಖ್ಯ ಕಾರಣ ಸಂಸ್ಥೆ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ .ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಂಸ್ಥೆಯನ್ನ ಬಲಿಪಡಿಯುತ್ತಿದ್ದಾರೆ.ಆರ್ ಟಿ ಐ ಅಡಿಯಲ್ಲಿ ಮಾಹಿತಿ ಪಡೆದು ಅಧಿಕಾರಿಗಳ ವಿರುದ್ದ ಎಂಡಿಗೆ ದೂರು ನೀಡಿದ್ರು ಏನು ಪ್ರಯೋಜನವಾಗುತ್ತಿಲ್ಲ.
 
ಎಂಡಿ ಜಿ. ಸತ್ಯವತಿಯವರು ಅಧಿಕಾರಿಗಳ ಪರವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.ನಾನು ದಾಖಲೆ ಸಮೇತ ದೂರು ನೀಡಿದ್ರು, ಅವರ ವಿರುದ್ದ ಕ್ರಮ ತೆಗೆದುಕೊಳ್ಳದೇ ನನ್ನ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.ಅಧಿಕಾರಿಗಳ ವಿರುದ್ದ ಯಾಕೆ ದೂರು ಕೊಟ್ಟಿದ್ದೀರಾ ಎಂದು ಸೂಚನಾ ಪತ್ರವನ್ನು ನೀಡಿ ನನ್ನನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ.ಆದ್ರಿಂದ ಮೊದಲು ಎಂಡಿ ಸತ್ಯವತಿಯನ್ನ ವಿಚಾರಣೆ ಪೂರ್ವ ಅಮಾನತ್ತು ಮಾಡಿನಂತ್ರ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ  ಚಾಲಕ ಪತ್ರ ಬರೆದಿದ್ದಾನೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರೈತರು, ದುಡಿಯುವ ವರ್ಗಕ್ಕೆ ಹೆಚ್ಚು ಒತ್ತನ್ನ ಕೊಡ್ತೇವೆ - ಸಿಎಂ