ಪ್ರಧಾನಿಯನ್ನು ಪನೌತಿ ಮೋದಿ ಎಂದು ಹಾಗೂ ಜೇಬುಗಳ್ಳ ಎಂದು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ. ಇದೇ ವೇಳೆ, ಮೋದಿ ಗುಜರಾತ್ ಮುಖ್ಯಮಂತ್ರಿಯಾದ ನಂತರ ಅವರ ಜಾತಿ ಒಬಿಸಿ ಪಟ್ಟಿಗೆ ಸೇರಿತು ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದೆ.ಇನ್ಮುಂದೆ ಇಂತಹ ಹೇಳಿಕೆಯನ್ನ ನೀಡದಂತೆ ಬಿಜೆಪಿ ಆಗ್ರಹಿಸಿದೆ.