Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಯಾರಿಂದ ಪ್ರಧಾನಿಯಾಗಿದ್ದಾರೆ ಗೊತ್ತಾ ಎಂದ ರಾಹುಲ್ ಗಾಂಧಿ

pm modi
delhi , ಶುಕ್ರವಾರ, 10 ನವೆಂಬರ್ 2023 (09:54 IST)
ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದ ಉದ್ಯಮಿಗಳು ನರೇಂದ್ರ ಮೋದಿ ಗೆಲ್ಲಲು ಸಾವಿರಾರು ಕೋಟಿ ರೂಪಾಯಿ ಹಣ ಸುರಿದರು. ತತ್ಪರಿಣಾಮವಾಗಿ ಅವರು ಅಧಿಕಾರವನ್ನು ಪಡೆದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
 
ಪ್ರಧಾನಿ ಮೋದಿ ಹಾಗೂ ಎನ್‌ಡಿಎ ಸರ್ಕಾರದ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದು ಉದ್ಯಮಿಗಳು ಎಂದು ಆರೋಪಿಸಿದ್ದಾರೆ.
 
ಜಾರಖಂಡ್‌ನಲ್ಲಿಪ್ರಚಾರದಲ್ಲಿ ತೊಡಗಿಕೊಂಡಿದ್ದ ರಾಹುಲ್, ಮೋದಿಯವರ ಸ್ವಚ್ಛತಾ ಅಭಿಯಾನದ ವಿರುದ್ಧ ಕುಹಕವಾಡುತ್ತ"ಅಚ್ಛೇ ದಿನ್ ಆಗಯೇ ಎಂದು ಪ್ರಧಾನಿ ಹೇಳಿದರು. ಬಳಿಕ ನಿಮ್ಮ ಕೈಗೆ ಪೊರಕೆ ಕೊಟ್ಟು ಕಸ ಗುಡಿಸಲು ಹೇಳಿದರು" ಎಂದರು.
 
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಜನಪರ ಕಾರ್ಯಕ್ರಮಗಳಾದ ಮಾಹಿತಿ ಹಕ್ಕು ಕಾಯ್ದೆ, ಆಹಾರ ಹಕ್ಕು ಕಾಯ್ದೆ, ಭೂಸ್ವಾಧೀನ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮುಂತಾದದವುಗಳನ್ನು ಬಿಜೆಪಿ ಸರ್ಕಾರ ಹಾಳು ಮಾಡಲಿದೆ ಎಂದು ಗಾಂಧಿ ಕಿಡಿಕಾರಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತನ ಭೇಟಿಗೆ ತೆರಳಿದ್ದ ಯುವತಿಯ ಮೇಲೆ ಗ್ಯಾಂಗ್‌ರೇಪ್