Select Your Language

Notifications

webdunia
webdunia
webdunia
webdunia

ಮುರುಘಮಠ ಸ್ವಾಮೀಜಿ ವಿರುದ್ಧ ದೂರು

ಮುರುಘ ಮಠ ಸ್ವಾಮೀಜಿ ವಿರುದ್ಧ ದೂರು
mysore , ಶನಿವಾರ, 27 ಆಗಸ್ಟ್ 2022 (17:29 IST)
ಮೈಸೂರಿನ ಮುರುಘ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯವೆಸಗಲಾಗುತ್ತಿದೆಂಬ ಆರೋಪ ಕೇಳಿ ಬಂದಿದೆ. ನಾಡಿನ ಪ್ರತಿಷ್ಠಿತ ಮುರುಘ ಮಠ ಡಾ.ಶಿವಮೂರ್ತಿ ವಿರುದ್ಧ ದೌರ್ಜನ್ಯಕೊಳಗಾದ ಇಬ್ಬರು ವಿದ್ಯಾರ್ಥಿನಿಯರು ನಗರದ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರದ ಒಡನಾಡಿ ಸಂಸ್ಥೆಗೆ ದೂರು ನೀಡಿದರು. ದೂರು ಪಡೆದ ಸಂಸ್ಥೆಯೂ ಆಪ್ತ ಸಮಾಲೋಚನೆ ನಡೆಸುತ್ತಿದೆ. ಮಠ ನಡೆಸುವ ಶಾಲೆಯಲ್ಲೇ ಓದುತ್ತಿರುವ ವಿದ್ಯಾರ್ಥಿನಿಯರು ಸರದಿಯಂತೆ ಸ್ವಾಮೀಜಿ ಬಳಿಗೆ ಹೋಗಬೇಕು. ಒಂದು ವೇಳೆ ಹೋಗಲು ನಿರಾಕರಿಸಿದರೆ ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಎಂದು ವಿದ್ಯಾರ್ಥಿನಿಯರು ಆಪ್ತ ಸಮಾಲೋಚನೆ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಸಂಸ್ಥೆ ನೀಡಿದ ದೂರು ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಡಿದ್ದು, ವಿದ್ಯಾರ್ಥಿನಿಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿ ಸಂಘಗಳಿಗೆ ಸಾವರ್ಕರ್ ಫೋಟೋ ವಿತರಣೆ