Publish Date: Sat, 27 Aug 2022 (17:25 IST)
Updated Date: Sat, 27 Aug 2022 (17:28 IST)
ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ವಿಚಾರ ಮುಂದುವರೆದಿದೆ. ಈ ಹಿನ್ನೆಲೆ ಗಣಪತಿ ಕೂರಿಸುವ ಸಂಘಗಳಿಗೆ ಸಾವರ್ಕರ್ ಫೋಟೋ ಜೊತೆಗೆ ಬಾಲಗಂಗಾಧರ್ ತಿಲಕ ಅವರ ಪೋಟೋ ಹಾಗೂ ಭಗವಧ್ವಜ ವಿತರಣೆ ಮಾಡಲಾಯಿತು. ನಗರದ ಕೋಟೆ ಸೀತರಾಮಾಂಜನೇಯ ದೇವಾಲಯದಲ್ಲಿ ರಾಷ್ಟ್ರ ಭಕ್ತರ ಬಳಗದವತಿಯಿಂದ ಉಚಿತವಾಗಿ ಗಣಪತಿ ಪ್ರತಿಷ್ಠಾಪನೆ ಸಂಘಗಳಿಗೆ ಧ್ವಜ, ಭಾವಚಿತ್ರ ವಿತರಣೆ ಮಾಡಿದರು. ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು. ಕಾಂತೇಶ್ಗೆ ಭಜರಂಗದಳದ ಜಿಲ್ಲಾ ಸಂಚಾಲಕ ದೀನ್ ದಯಾಳ್, ಶಿವಮೊಗ್ಗ ಗಣಪತಿ ಸಮಿತಿಯ ಸದಸ್ಯರು ಸಾಥ್ ನೀಡಿದರು.