Select Your Language

Notifications

webdunia
webdunia
webdunia
webdunia

ಕಾನ್ಸ್‌ಟೇಬಲ್ ಕಾರ್ಯಕ್ಕೆ ಕಮಿಷನರ್ ಶ್ಲಾಘನೆ

Constable Work
bangalore , ಶುಕ್ರವಾರ, 1 ಸೆಪ್ಟಂಬರ್ 2023 (21:20 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆ ಹೆಬ್ಬಾಳದಲ್ಲಿ ವಾಹನ ಓಡಾಟಕ್ಕೆ ಸವಾರರು ಪರದಾಟ ನಡೆಸಿದ್ದಾರೆ. ದಿಢೀರ್ ಬಂದ ಮಳೆಗೆ ರಸ್ತೆಪೂರ ಹೊಳೆಯಂತಾಗಿತ್ತು. ರಸ್ತೆಗಳಲ್ಲಿ ದೊಡ್ಡ ಮಟ್ಟದಲ್ಲಿ ನೀರು ಶೇಖರಣೆಯಾಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹೆಬ್ಬಾಳ‌ ಫ್ಲೈಓವರ್ ಕೆಳಗೆ ಆಳೆತ್ತರಕ್ಕೆ ಮಳೆ ನೀರು ನಿಂತಿತ್ತು.. 12 ಗಂಟೆ ಸುಮಾರಿಗೆ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್ ನಿಂತಿದ್ದ ನೀರನ್ನು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಪೊಲೀಸ್ ಕಾನ್ಸ್​ಟೇಬಲ್ ಕಾರ್ಯಕ್ಕೆ ಪೊಲೀಸ್ ಕಮಿಷನರ್ ದಯಾನಂದ್ ಟ್ವೀಟ್​​ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಆಸ್ಪತ್ರೆಯಿಂದ HDK ಡಿಸ್ಚಾರ್ಜ್