Select Your Language

Notifications

webdunia
webdunia
webdunia
webdunia

ನಾಳೆಯಿಂದ ಕಾವೇರಿ ಚಳವಳಿ ಆರಂಭಿಸುತ್ತೇವೆ

Cauvery movement
bangalore , ಶುಕ್ರವಾರ, 1 ಸೆಪ್ಟಂಬರ್ 2023 (20:40 IST)
ಆಸ್ಪತ್ರೆಯಲ್ಲಿದ್ದೇ ಕಾವೇರಿ ಹೋರಾಟಕ್ಕೆ ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ. ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ್ದ ಮಳವಳ್ಳಿ ಮಾಜಿ ಶಾಸಕ ಅನ್ನದಾನಿಗೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಹೆಚ್​​ಡಿಕೆ ಭೇಟಿ ಬಳಿಕ ಮಾತನಾಡಿದ ಅವರು, ನಾಳೆಯಿಂದ ಜೆಡಿಎಸ್​​ನಿಂದ ಕಾವೇರಿ ಚಳವಳಿ ನಡೆಯಲಿದೆ. ಸದ್ಯದ ಪರಿಸ್ಥಿತಿ ಕಾವೇರಿ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದ್ರು. ಅರ್ಧಗಂಟೆಗೂ ಹೆಚ್ಚು ಕಾಲ ನನ್ನೊಟ್ಟಿಗೆ ಮಾತನಾಡಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಕಾವೇರಿ ನೀರು ಉಳಿವಿಗಾಗಿ ಹೋರಾಟ ಶುರು ಮಾಡಿ ಅಂತ ಕರೆ ಕೊಟ್ಟಿದ್ದಾರೆ. ನಾಳೆ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ನೇತೃತ್ವದಲ್ಲಿ ಚಳವಳಿ ಆರಂಭವಾಗಲಿದೆ. ಸದ್ಯದ ನೀರಿನ ಪರಿಸ್ಥಿತಿ ಬಹಳ ಕೆಟ್ಟದಾಗಿದೆ.ಮುಂದಿನ ದಿನಗಳಲ್ಲಿ ಮಂಡ್ಯ ಸೇರಿದಂತೆ ಬೆಂಗಳೂರಿಗೂ ನೀರಿನ ಅಭಾವ ಎದುರಾಗಲಿದೆ. ಈಗಾಗಿ ಚಳವಳಿ ಅಗತ್ಯವಿದೆ ಎಂದು ಕುಮಾರಣ್ಣ ಹೇಳಿದ್ದಾರೆ. ಅದರಂತೆ ನಾಳೆಯಿಂದ ಚಳವಳಿ ಆರಂಭಿಸುತ್ತೇವೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲಿರುವ ಸಿಎಂ