Publish Date: Fri, 09 Apr 2021 (12:47 IST)
Updated Date: Fri, 09 Apr 2021 (12:52 IST)
ಬೆಂಗಳೂರು : ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಹಠ ಬಿಡಿ ಕೆಲಸಕ್ಕೆ ಬನ್ನಿ ಎಂದು ಸಾರಿಗೆ ನೌಕರರಿಗೆ ಸಿಎಂ ಬಿಎಸ್ ವೈ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ ಮೇಲೆ ಮತ್ಯಾಕೆ ಮಾತುಕತೆ? ಸಾರಿಗೆ ನೌಕರರ ಜತೆ ಮತ್ತೆ ಮಾತುಕತೆ ಇಲ್ಲ ಎಂದು ಮಾತುಕತೆಯ ಸಾಧ್ಯತೆಯನ್ನು ಸಿಎಂಬಿಎಸ್ ಯಡಿಯೂರಪ್ಪ ತಳ್ಳಿಹಾಕಿದ್ದಾರೆ.
ನಾನು ಹಠ ಮಾಡುತ್ತಿಲ್ಲ. ಹಠ ಮಾಡದೇ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ, ಜನರು ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದ್ದಾರೆ. ಹಣಕಾಸಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗ ಜಾರಿ ಇಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.