Webdunia - Bharat's app for daily news and videos

Install App

ಕುಸಿದ ಕಟ್ಟಡದ ಪ್ರದೇಶ ಸಂಪೂರ್ಣ ಪಾಲಿಕೆ ವಶಕ್ಕೆ: ತೆರವು ಕಾರ್ಯ

Webdunia
ಮಂಗಳವಾರ, 28 ಸೆಪ್ಟಂಬರ್ 2021 (17:15 IST)
ಬೆಂಗಳೂರು: ಲಕ್ಕಸಂದ್ರದಲ್ಲಿ ಏಕಾಕೀ ಬಿಲ್ಡಿಂಗ್ ಕುಸಿದು ಬಿದ್ದ ಪರಿಣಾಮ ನಗರದ ಜನತೆ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಪಾಲಿಕೆ ಸ್ಪಷ್ಟನೆ ನೀಡಿದ್ದು, ಯಾವದೇ ಆಸ್ತಿ ಪಾಸ್ತಿ ಪ್ರಾಣಹಾನಿ ಸಂಭವಿಸಿಲ್ಲ. ಸಂಪೂರ್ಣ ಕಟ್ಟಡವನ್ನು ವಶಕ್ಕೆ ಪಡೆಯಿರಿ ಅವಶೇಷಗಳ ತೆರವು ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ ಎಂದು ತಿಳಿಸಲಾಗಿದೆ.   
 
ನಗರದ ಲಕ್ಕಸಂದ್ರದಲ್ಲಿ ಇದ್ದಕ್ಕಿದ್ದಂತೆ 3 ಮಹಡಿ ಕಟ್ಟಡ 1962 ರಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಮೆಟ್ರೋ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ವಾಸಿಸುತ್ತಿದ್ದರು. ಬೆಳಿಗ್ಗೆ ಕಟ್ಟಡ ವಾಲಿದ್ದರಿಂದ ಅದರಲ್ಲಿದ್ದ 70 ಕಾರ್ಮಿಕರನ್ನು ತೆರವು ಮಾಡಿ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನೆ ಎದುರೇ ಈ ಘಟನೆ ನೆಡೆದಿತ್ತು. 
 
ಈ ಕುರಿತು ಪಾಲಿಕೆ ವಿವರವಾದ ಸ್ಪಷ್ಟನೆ ನೀಡಿದ್ದು ಬಿಬಿಎಂಪಿ ದಕ್ಷಿಣ ವಲಯದ ವಾರ್ಡ್ ಸಂಖ್ಯೆ 145ರ ವ್ಯಾಪ್ತಿಯ 7ನೇ ಮುಖ್ಯರಸ್ತೆ, 15ನೇ ಕ್ರಾಸ್, ಲಕ್ಕಸಂದ್ರದಲ್ಲಿ ಸುಮಾರು 70 ವರ್ಷಗಳ ಹಳೆಯ ಶಿಥಿಲಾವ್ಯವಸ್ಥೆಯಲ್ಲಿರುವ 3 ಅಂತಸ್ತಿನ ಕಟ್ಟಡ ಬೆಳಿಗ್ಗೆ ಸುಮಾರು 10. 30 ರ ಸಮಯದಲ್ಲಿ ಕುಸಿದು ಬಿದ್ದಿದೆ. ಖಾಲಿ ಇರುವ ಕಟ್ಟಡವನ್ನು ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರುಗಳಿಗೆ ಬಾಡಿಗೆಗೆ ಕಟ್ಟಡದ ಮಾಲೀಕ ನೀಡಿದ್ದ. ಮೆಟ್ರೋ ಕಾಮಗಾರಿಯ ಕಾರ್ಮಿಕರುಗಳು ಕೆಲಸಕ್ಕೆ ಹೋಗಿದ್ದರಿಂದ ಮತ್ತು  ಕಟ್ಟಡದಲ್ಲಿ ಬಹುತೇಕ ಕಾರ್ಮಿಕರು ಇಲ್ಲದೇ ಇದ್ದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಯಾವುದೇ ಆಸ್ತಿ-ಪ್ರಾಸ್ತಿಗೆ ಹಾನಿ ಸಂಭವಿಸಿಲ್ಲ.  ಸುತ್ತಮುತ್ತಲಿನ ಸಾರ್ವಜನಿಕರಿಗೆ ಕೂಡ  ಯಾವುದೇ ತೊಂದರೆಯಾಗಿಲ್ಲ ಎಂದಿದೆ.
 
ಪೊಲೀಸ್ ಠಾಣೆಗೆ ದೂರು: 
 
ಸ್ಥಳಕ್ಕೆ ಶಾಸಕ ಉದಯ್ ಗರುಡಾಚಾರ್ ಭೇಟಿ ನೀಡಿ ತಪಾಸಣೆ ಮಾಡಿದ್ದಾರೆ. ಈ  ಕಟ್ಟಡದ ಮಾಲೀಕ ಸುರೇಶ್  ಶಿಥಿಲಾವ್ಯವಸ್ಥೆಯಲ್ಲಿರುವ ಕಟ್ಟಡವನ್ನು 50-60 ಜನರಿಗೆ ವಾಸ್ತವ್ಯ ಮಾಡಲು ಬಾಡಿಗೆಗೆ ನೀಡಿ ಪ್ರಾಣಹಾನಿಗೆ ಕಾರಣ ಆಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಇದೀಗ ಪೊಲೀಸರು ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ  ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 
 
ರಾತ್ರಿ ಕುಸಿದಿದ್ದರೆ 50 ಕ್ಕೂ ಹೆಚ್ಚು ಜನರ ಸಾವು: 
 
ವಿಲ್ಸನ್ ಗಾರ್ಡನ್ ಬಳಿಯ ಲಕ್ಕಸಂದ್ರದ 7 ನೇ ಮುಖ್ಯ ರಸ್ತೆ, 15 ನೇಯ ಅಡ್ಡ ರಸ್ತೆಯಲ್ಲಿದ್ದ ಈ ಕಟ್ಟಡದ 1962 ರಲ್ಲಿ ನಿರ್ಮಿಸಲಾದ ಘಟಕ. ಸುರೇಶ್ ಎಂಬುವವರಿಗೆ ಸೇರಿದ ಈ ಕಟ್ಟಡದಲ್ಲಿ ಮೆಟ್ರೋ ಕಾರ್ಮಿಕರು ವಾಸವಾಗಿದ್ದರು. ಕಟ್ಟಡ ವಾಲಿದ ಸಮಯದಲ್ಲಿ ಬೆಳಿಗ್ಗೆ ಕಾರ್ಮಿಕರನ್ನು ಕಟ್ಟಡದಿಂದ ತೆರವು ಮಾಡಲಾಗುತ್ತಿದೆ. ಮುಂಜಾಗ್ರತೆಯಿಂದ ಕಾರ್ಮಿಕರನ್ನು ಮೊದಲೇ ತೆರವುಗೊಳಿಸಿದ್ದರಿಂದ ಭಾರೀ ದುರಂತ ತಪ್ಪಿತು. ಈ ಮೂರು ಅಂತಸ್ತಿನ ಕಟ್ಟಡದಲ್ಲಿ ಸುಮಾರು 70 ಮಂದಿ ಕಾರ್ಮಿಕರು ವಾಸವಿದ್ದರು. ಅಕಸ್ಮಾತ್ ಕಟ್ಟಡ ರಾತ್ರಿ ವೇಳೆ ಕುಸಿದಿದ್ದರೆ 50 ಕ್ಕಿಂತ ಹೆಚ್ಚು ಕಾರ್ಮಿಕರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಆತಂಕದ ಜನರು ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral

ಮಗನ ಇನ್ನೊಂದು ಸಂಬಂಧ ತಿಳಿಯುತ್ತಿದ್ದ ಹಾಗೇ RJDಯಿಂದ ಉಚ್ಛಾಟಿಸಿದ ಲಾಲು

18 ಬಿಜೆಪಿ ಶಾಸಕರ ಅಮಾನತು ವಾಪಾಸ್ ಪಡೆಯುವ ಮುನ್ಸೂಚನೆ ಕೊಟ್ಟ ಸ್ಪೀಕರ್ ಯುಟಿ ಖಾದರ್‌

ಆಪರೇಷನ್ ಸಿಂಧೂರ್‌ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ಪ್ರತಿಬಿಂಬ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಭಾರತ: ಐದನೇ ಸ್ಥಾನಕ್ಕೆ ಜಾರಿದ ಜಪಾನ್‌

ಮುಂದಿನ ಸುದ್ದಿ
Show comments