Select Your Language

Notifications

webdunia
webdunia
webdunia
webdunia

ಬಿಡಿಎ ಅಧಿಕಾರಿಗಳಿಂದ ಮನೆಗಳ ತೆರವು ಕಾರ್ಯಾಚರಣೆ

ಬಿಡಿಎ ಅಧಿಕಾರಿಗಳಿಂದ ಮನೆಗಳ ತೆರವು ಕಾರ್ಯಾಚರಣೆ
bangalore , ಶನಿವಾರ, 7 ಆಗಸ್ಟ್ 2021 (20:53 IST)
ಶನಿವಾರ ಬೆಳಗ್ಗೆ ಧೀಡಿರ್ ಕಾರ್ಯಾಚರಣೆ ಆರಂಭಿಸಿದ ಬಿಡಿಎ ಅಧಿಕಾರಿಗಳು ಮೀಸಲು ಪೊಲೀಸ್  ಪಡೆಯ ಭದ್ರತೆಯಲ್ಲಿ ಮನೆಗಳನ್ನು ತೆರವುಗೊಳಿಸುತ್ತಿರುವ ಮನಕುಲುಕುವಂಥಹ  ದೃಶ್ಯ ಕಂಡು ಬಂದಿದ್ದು ಬೆಂಗಳೂರು ಹೊರವಲಯ ಯಲಹಂಕ ವಿಧಾನಸಭಾ ಕ್ಷೇತ್ರದ ಅಟ್ಟೂರು ಹಾಗೂ ಬೆಟ್ಟಹಳ್ಳಿ ಗ್ರಾಮದಲ್ಲಿ ಮನೆಗಳನ್ನುಹೊಡೆಯುತ್ತಿದ್ದಾರೆ. ಮನೆಗಳಲ್ಲಿದ್ದ ವಸ್ತುಗಳನ್ನು ಕೂಡ ಹೊರಗೆ ಸಾಗಿಸಲು ಬಿಡಲಿಲ್ಲ  ತೆರವು ಕಾರ್ಯಾಚರಣೆ ಮುಂದುವರೆಸಿದರು. ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಸಾಗಿಸುವುದಕ್ಕೆ ಅವಕಾಶ ಕೊಡಿ ಎಂದು ಅಧಿಕಾರಿಗಳ ಹತ್ತಿರ ಅಂಗಲಾಚಿದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ . ಸುಪ್ರೀಂಕೋರ್ಟ್ ಆದೇಶ ಇರುವುದರಿಂದ ನಾವು ಅಸಹಾಯಕರು ಎಂದು ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದರು. ಸಾಕಷ್ಟು ಜನರು ಸಾಲ ಸೋಲ ಮಾಡಿ ಮನೆಯನ್ನು ಕಟ್ಟಿದ್ದೇವೆ ಏಕಾಏಕಿ ಅಧಿಕಾರಿಗಳು ಬಂದು ಮನೆಗಳನ್ನು ತೆರವುಗೊಳಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದರು .ಗ್ರಾಮದ ತುಂಬಾ ಪೊಲೀಸ್ ನವರು ಬಿಡು ಬಿಟ್ಟಿದ್ದಾರೆ ಮನೆ ಹೊಡೆಯಲು ಬಂದ ಜೆಸಿಬಿ ಮೇಲೆ ನಿಂತು ಸ್ಥಳೀಯರು ಜೆಸಿಬಿಯನ್ನು ತಡೆದರು ಅಷ್ಟೇ ಅಲ್ಲದೆ ಅಧಿಕಾರಿಗಳ ವಿರುದ್ಧ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ದಿಕ್ಕಾರವನ್ನು ಕೂಡ ಕೂಗಿದರು .ಈ ಹಿಂದೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಬಿಡಿಎ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಮನೆಗಳನ್ನು ಹೊಡೆಯುವ ಕಾರ್ಯವನ್ನು ಪಾದಯಾತ್ರೆ ಮಾಡುವುದರ ಮೂಲಕ ಅಧಿಕಾರಿಗಳಿಗೆ ಎಚ್ಚರಿಸಿ ತಡೆಹಿಡಿದಿದ್ದರು ಆದರೆ ಈಗ ಬಿಡಿಎ ಅಧ್ಯಕ್ಷ ಎಸ್. ಆರ್ .ವಿಶ್ವನಾಥ್ ಹಾಗಿದ್ದರೂ  ಇದರ ವಿರುದ್ಧ ಯಾವುದೇ ಮಾತುಗಳನ್ನು ಕೂಡ ಆಡುತಾ ಇಲ್ಲ ಎಂದು ಸ್ಥಳೀಯರು ಎಸ್.ಆರ್.ವಿಶ್ವನಾಥ್ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದರು .ಒಟ್ಟಿನಲ್ಲಿ ಮನೆ ಕಳೆದುಕೊಂಡವರ ಕಥೆ ಹೇಳತೀರಲಾಗಿದೆ ಅಲ್ಲಿನ ಕೆಲವು ಸ್ಥಳಿಯಯರು ನಮಗೆ ಯಾವುದೇ ಯಾವುದೇ ರೀತಿಯ ನೋಟಿಸ್ ಅನ್ನು ಕೂಡ ನೀಡಿಲ್ಲ  ಬಂದು ಮನೆಗಳನ್ನು ಹೊಡಿದಿದ್ದಾರೆ ಎಂದು ತಿಳಿಸಿದರು .ದಲಿತರ ಮನೆಗಳನ್ನು ಕೂಡ ಹೊಡೆಯಲಾಗಿದೆ .ಮನೆಯಲ್ಲಿದ್ದ ವಸ್ತುಗಳು ಬೀದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ  ಈ ಎಲ್ಲಾ ಘಟನೆ ನಡೆದಿರುವುದು ಯಲಹಂಕ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಹೆಚ್ಚಾದರೆ ಲಾಕ್ ಡೌನ್; ಕೋಟ ಶ್ರೀನಿವಾಸ್ ಸುಳಿವು