Select Your Language

Notifications

webdunia
webdunia
webdunia
webdunia

ಪುಟ್ಟೇನಹಳ್ಳಿಯಲ್ಲಿ ಮೂಡಿ ಬಂದಿದೆ ಕೋಕೋನಟ್ ಗಣೇಶ

ಪುಟ್ಟೇನಹಳ್ಳಿಯಲ್ಲಿ ಮೂಡಿ ಬಂದಿದೆ ಕೋಕೋನಟ್ ಗಣೇಶ
ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2019 (12:38 IST)
ಬೆಂಗಳೂರು : ರಾಜ್ಯದೆಲ್ಲೆಡೆ  ಗೌರಿ ಗಣೇಶ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಇದೀಗ ಪುಟ್ಟೇನಹಳ್ಳಿಯಲ್ಲಿ ಕೋಕೋನಟ್ ಗಣೇಶನನ್ನು ರಚಿಸಿ, ಪೂಜಿಸಿ ಅಲ್ಲಿನ ಜನರು ಪರಿಸರ ಪ್ರೇಮವನ್ನು ಮೆರೆದಿದ್ದಾರೆ.






ಪುಟ್ಟೇನಹಳ್ಳಿಯಲ್ಲಿ ಕಳೆದ ವರ್ಷ ಇಲ್ಲಿ ಕಬ್ಬಿನ ಗಣೇಶನನ್ನು ಕೂರಿಸಲಾಗಿತ್ತು. ಆದರೆ ಈ ವರ್ಷ ವಿಶೇಷವಾದ ಸಂಪೂರ್ಣವಾಗಿ ಸಾವಿರಾರು ತೆಂಗಿನಕಾಯಿ, ಎಳನೀರು ಹಾಗೂ ಟನ್‍ಗಟ್ಟಲೆ ತರಕಾರಿಗಳನ್ನು ಬಳಸಿ ಪರಿಸರ ಸ್ನೇಹಿ ಗಣಪತಿಯನ್ನು ಮಾಡಿ, ಪೂಜಿಸಲಾಗುತ್ತಿದೆ. ಬರೋಬ್ಬರಿ 9 ಸಾವಿರ ತೆಂಗಿನ ಕಾಯಿ, 3 ಸಾವಿರ ಎಳನೀರು, 21 ವಿವಿಧ ಬಗೆಯ 15 ಟನ್‍ನಷ್ಟು ತರಕಾರಿಯನ್ನು ಬಳಸಿ ಈ ಗಣೇಶನನ್ನು ನಿರ್ಮಿಸಲಾಗಿದೆ.


ಈ ಗಣೇಶನನ್ನು ರಚಿಸಲು 75 ಜನ ಕೆಳೆದ 25 ದಿನಗಳಿಂದ ಶ್ರಮಿಸಿದ್ದಾರೆ ಎನ್ನಲಾಗಿದೆ. ಮೂರು ದಿನದ ಬಳಿಕ ಈ ಎಲ್ಲಾ ತೆಂಗಿನಕಾಯಿ, ತರಕಾರಿಯನ್ನು ಭಕ್ತರಿಗೆ ಹಂಚಲಾಗುತ್ತದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಚಾರಣೆಗೆ ತೆರಳುವುದಕ್ಕೂ ಮುನ್ನ ಕಣ್ಣೀರು ಹಾಕಿದ ಡಿಕೆಶಿ. ಕಾರಣವೇನು ಗೊತ್ತಾ?