Publish Date: Fri, 16 Apr 2021 (09:41 IST)
Updated Date: Fri, 16 Apr 2021 (09:42 IST)
ಬೆಳಗಾವಿ: ಉಪಚುನಾವಣೆ ಕದನಕ್ಕೆ ಧುಮುಕಿದ್ದ ಸಿಎಂ ಯಡಿಯೂರಪ್ಪಗೆ ಜ್ವರ ಕಾಣಿಸಿಕೊಂಡಿದೆ. ವಿಪರೀತ ಜ್ವರ, ಸುಸ್ತು ಕಾಣಿಸಿಕೊಂಡಿದ್ದರಿಂದ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.
ಬೆಳಗಾವಿಗೆ ಬಂದಿದ್ದ ಸಿಎಂ ಶಿವಾಜಿ ಮಹಾರಾಜ ಉದ್ಯಾನವನದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಿದ್ದರು. ಆದರೆ ಜ್ವರ ಬಂದಿದ್ದರಿಂದ ಇದೀಗ ಪ್ರಚಾರ ಮೊಟಕುಗೊಳಿಸಿ ಹೋಟೆಲ್ ನಲ್ಲಿಯೇ ವಿಶ್ರಾಂತಿ ಪಡೆದು ವಾಪಸಾಗಿದ್ದಾರೆ.
ನಿನ್ನೆ ಪ್ರಚಾರದ ಕಡೆ ದಿನವಾಗಿತ್ತು. ಆದರೆ ಜ್ವರ, ಸುಸ್ತಿನಿಂದಾಗಿ ಸಿಎಂ ಅರ್ಧಕ್ಕೇ ಪ್ರಚಾರ ಮೊಟಕುಗೊಳಿಸಿ ಹೋಟೆಲ್ ಗೆ ತೆರಳಿ ವಿಶ್ರಾಂತಿ ಪಡೆದಿದ್ದರು. ಸಿಎಂ ಹೋಟೆಲ್ ನಿಂದ ತೆರವಾದ ಬಳಿಕ ಅಲ್ಲಿ ಸ್ಯಾನಿಟೈಸೇಷನ್ ಮಾಡಲಾಗಿದೆ.