ಬೆಂಗಳೂರು: ಕೊರೋನಾ ಪ್ರಕರಣ ದಿನೇ ದಿನೇ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ರಾಜ್ಯದಲ್ಲೂ ಕಠಿಣ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಆರೋಗ್ಯ ಸಚಿವ ಡಾ. ಸುಧಾಕರ್ ಸಭೆ, ಸಮಾರಂಭಗಳನ್ನು ಎರಡು ತಿಂಗಳ ಮಟ್ಟಿಗೆ ಮುಂದೂಡಿ ಎಂದು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ವೀಕೆಂಡ್ ಲಾಕ್ ಡೌನ್ ನಿಯಮ ಜಾರಿಗೆ ತರಲಾಗಿದೆ.
ರಾಜ್ಯದಲ್ಲೂ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ವೀಕೆಂಡ್ ಲಾಕ್ ಡೌನ್ ನಿಯಮ ಜಾರಿಗೆ ತಂದರೂ ಅಚ್ಚರಿಯಿಲ್ಲ. ಪೂರ್ಣಪ್ರಮಾಣದಲ್ಲಿ ಲಾಕ್ ಡೌನ್ ಘೋಷಿಸುವುದಕ್ಕೆ ಜನರಿಂದಲೇ ವಿರೋಧವಿದೆ. ಹೀಗಾಗಿ ವೀಕೆಂಡ್ ನಲ್ಲಿ ಎರಡು ದಿನಗಳ ಮಟ್ಟಿಗೆ ಲಾಕ್ ಡೌನ್ ನಿಯಮ ಜಾರಿಗೆ ತಂದರೂ ಅಚ್ಚರಿಯಿಲ್ಲ.