Publish Date: Wed, 28 Aug 2019 (13:05 IST)
Updated Date: Wed, 28 Aug 2019 (13:08 IST)
ಬೆಂಗಳೂರು : ಸರ್ಕಾರದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಅಸಮಾಧಾನಿತ ಶಾಸಕರಿಗೆ ಸಿಎಂ ಯಡಿಯೂರಪ್ಪ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರಾದ ತಿಪ್ಪಾರೇಡ್ಡಿ, ಗೂಳಿಹಟ್ಟಿ ಶೇಖರ್ ಹಾಗೂ ರಾಜೀವ್ ಅವರು ಬಿಜೆಪಿ ಸರ್ಕಾರ ಹಾಗೂ ಹೈಕಮಾಂಡ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದು, ಈ ವಿಚಾರ ತಿಳಿದ ಸಿಎಂ ಯಡಿಯೂರಪ್ಪ ಈ ಮೂವರು ಶಾಸಕರನ್ನು ತಮ್ಮ ನಿವಾಸಕ್ಕೆ ಇಂದು ಕರೆಸಿಕೊಂಡು ತಿಳಿ ಹೇಳಿದ್ದಾರೆ.
‘ನೀವು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದೀರಿ. ಈ ಮೂಲಕ ಹೈಕಮಾಂಡ್ ಕೆಂಗಣ್ಣಿಗೆ ಗುರಿ ಆಗುತ್ತಿದ್ದೀರಿ. ಸಂಪುಟ ವಿಸ್ತರಣೆ ಇನ್ನೂ ಬಾಕಿ ಇದೆ. ಎಚ್ಚರಿಕೆಯಿಂದ ಇರಬೇಕು. ಬಹಿರಂಗವಾಗಿ ಹೇಳಿಕೆ ನೀಡುವುದನ್ನು ಹೈಕಮಾಂಡ್ ಸಹಿಸುವುದಿಲ್ಲ. ಇದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.