Select Your Language

Notifications

webdunia
webdunia
webdunia
webdunia

ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್

ಬಿಜೆಪಿ ತೊರೆದ ನಾಯಕರಿಗೆ ಸಿಎಂ ಟಾಂಗ್
ಬೆಂಗಳೂರು , ಸೋಮವಾರ, 17 ಏಪ್ರಿಲ್ 2023 (14:52 IST)
ಬೆಂಗಳೂರು : ಬಿಜೆಪಿ ಜನ ಸಮುದಾಯದಿಂದ ಹಾಗೂ ಕಾರ್ಯಕರ್ತರಿಂದ ಬೆಳೆದಿರುವ ಪಕ್ಷ. ಇಂತಹ ಘಟನೆಗಳನ್ನು ಸಂಪೂರ್ಣವಾಗಿ ನಿಭಾಯಿಸುವ ಶಕ್ತಿ ಬಿಜೆಪಿಗಿದೆ. ನಾವು ಖಂಡಿತವಾಗಿಯೂ ನಮ್ಮ ಕ್ಷೇತ್ರವನ್ನು ಗಟ್ಟಿಯಾಗಿ ಇಟ್ಟುಕೊಳ್ಳುತ್ತೇವೆ.
 
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ನಮ್ಮ ಹಿಡಿತವನ್ನು ಸಾಧಿಸುವುದಕ್ಕೆ ಬೇಕಾಗಿರುವ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳತ್ತೇವೆ ಎಂದು ಹೇಳಿದರು. 

ಕಳೆದ 50 ವರ್ಷಗಳಿಂದ ಲಿಂಗಾಯತ ನಾಯಕರನ್ನು ತುಳಿದಿದ್ದು ಇದೇ ಕಾಂಗ್ರೆಸ್ ಪಕ್ಷ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಲಿಂಗಾಯತರ ಮೇಲೆ ಯಾಕಿಷ್ಟು ಪ್ರೀತಿ ಬಂತೋ ಗೊತ್ತಿಲ್ಲ. ಲಿಂಗಾಯತ ಸಮುದಾಯ ಜಾಗೃತ ಸಮುದಾಯವಾಗಿದ್ದು, ಇದುವರೆಗೂ ಯಾರು ಅವರನ್ನು ಬೆಂಬಲಿಸಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಯಡಿಯೂರಪ್ಪನವರಂತಹ ಮೇರು ನಾಯಕತ್ವ ಹೊಂದಿರುವ ನಾಯಕರು ನಮ್ಮ ಜೊತೆ ಇರುವವರೆಗೂ ಲಿಂಗಾಯತರು ನಮ್ಮ ಜೊತೆಗೆ ಇರುತ್ತಾರೆ ಎಂದರು. 

ಕಾಂಗ್ರೆಸ್ನಲ್ಲಿ ಇದೇ ರೀತಿ ಅವತ್ತಿನ ಜನತಾ ಪಾರ್ಟಿಯಲ್ಲಿದ್ದ ವೀರೇಂದ್ರ ಪಾಟೀಲ್ ಅವರನ್ನು ಕರೆದುಕೊಂಡು ರಾಜ್ಯ ಸುತ್ತಿಸಿ ಅವರ ಮುಖಾಂತರವೇ 180 ಸೀಟ್ ಗೆದ್ದುಕೊಂಡಿದ್ದರು. ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ತೆಗೆದುಹಾಕಿ ಅವಮಾನ ಮಾಡಿರುವಂತಹ ಉದಾಹರಣೆಗಳು ನಮ್ಮ ಕಣ್ಣಮುಂದಿದೆ. ಅಲ್ಲದೇ ಬಂಗಾರಪ್ಪನವರನ್ನು ಉಪಯೋಗಿಸಿಕೊಂಡು ಮುಂದೆ ಅವರನ್ನು ತಿರಸ್ಕಾರ ಮಾಡಿರುವುದೂ ನಮಗೆ ಗೊತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಗಟ್ಟಿಯಾಗಿ ಇಂದಿರಾ ಕಾಂಗ್ರೆಸ್ ಅವರೊಂದಿಗೆ ನಿಂತ ದೇವರಾಜ್ ಅರಸ್ ಅವರನ್ನು ಯೂಸ್ ಆ್ಯಂಡ್ ಥ್ರೋ ಮಾಡಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದೆಲ್ಲವೂ ಗೊತ್ತಿದ್ದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಯಾಕೆ ಸೇರಿದರು ಎಂಬುದು ನನಗೆ ಇನ್ನೂ ಕೂಡಾ ಆಶ್ಚರ್ಯವಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 

ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ನಮ್ಮ ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಸಿಗುತ್ತಿದೆ. ಖಂಡಿತವಾಗಿಯೂ ಸಂಪೂರ್ಣ ಬಹುಮತದೊಂದಿಗೆ ಹೊಸ ನಾಯಕತ್ವ ಆಡಳಿತಕ್ಕೆ ಬರಲಿದೆ. ಎಲ್ಲಾ ಸಮುದಾಯಗಳು ಕೂಡಾ ನಮ್ಮ ಬೆಂಬಲಕ್ಕೆ ನಿಲ್ಲುತ್ತವೆ. ಕಾಂಗ್ರೆಸ್ ಪಕ್ಷದ ಈ ಹುನ್ನಾರ ಕೆಲವೇ ದಿನಗಳಲ್ಲಿ ಬಯಲಾಗುತ್ತದೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ : ಬಸವರಾಜ ಬೊಮ್ಮಾಯಿ