Publish Date: Tue, 17 Apr 2018 (09:11 IST)
Updated Date: Tue, 17 Apr 2018 (09:13 IST)
ಮೈಸೂರು: ವಿಧಾನಸಭೆ ಚುನಾವಣೆಗೆ ತಮ್ಮ ವರುಣಾ ಕ್ಷೇತ್ರವನ್ನು ಪುತ್ರ ಡಾ. ಯತೀಂದ್ರಗೆ ಬಿಟ್ಟುಕೊಟ್ಟಿರುವ ಸಿಎಂ ಸಿದ್ದರಾಮಯ್ಯ ಇಂದು ಕ್ಷೇತ್ರದಲ್ಲಿ ಮತ ಯಾಚನೆ ಮಾಡಲಿದ್ದಾರೆ.
ಪುತ್ರ ಯತೀಂದ್ರನಿಗೆ ಮತ ಹಾಕುವಂತೆ ಸಿದ್ದರಾಮಯ್ಯ ಇಂದು ವರುಣಾ ಕ್ಷೇತ್ರದಲ್ಲಿ ಸುತ್ತಾಟ ನಡೆಸಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ನಿನ್ನೆಯೇ ಮೈಸೂರಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆವರೆಗೆ ಮೈಸೂರಿನಲ್ಲಿಯೇ ವಾಸ್ತವ್ಯವಿರಲಿದ್ದಾರೆ.
ಮೈಸೂರಿನಲ್ಲಿ ತಾವು ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರ ಮತ್ತು ಪುತ್ರ ಸ್ಪರ್ಧಿಸುವ ವರುಣಾ ಕ್ಷೇತ್ರಗಳ ಹಳ್ಳಿಗಳಿಗೆ ಓಡಾಡಲಿದ್ದಾರೆ. ಈ ಮೂಲಕ ತಮ್ಮ ಜತೆಗೆ ಪುತ್ರನ ಗೆಲುವಿಗೆ ಭದ್ರ ಭುನಾದಿ ಹಾಕಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.