Publish Date: Wed, 21 Feb 2018 (09:18 IST)
Updated Date: Wed, 21 Feb 2018 (09:21 IST)
ಬೆಂಗಳೂರು: ಮೈಸೂರಿಗೆ ಬಂದಿದ್ದಾಗ ಪ್ರಧಾನಿ ಮೋದಿ ಸಿಎಂ ಸಿದ್ದರಾಮಯ್ಯ ಸರ್ಕಾರ ಕಮಿಷನ್ ಸರ್ಕಾರ ಎಂದು ಟೀಕಿಸಿರುವುದಕ್ಕೆ ತಿರುಗೇಟು ನೀಡಿದ ಸಿಎಂ, ಬುರುಡೆ ದಾಸರಿಂದ ಬದಲಾವಣೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಬುರುಡೆ ದಾಸರು ಬಂದು ಬುರುಡೆ ಬಿಟ್ಟು ಹೋಗುತ್ತಾರೆ. ಅವರಿಂದ ಬದಲಾವಣೆ ಆಗಲ್ಲ. ನಮ್ಮ ಸರ್ಕಾರವನ್ನು ಕಮಿಷನ್ ಸರ್ಕಾರ ಎನ್ನುವ ಮೋದಿಗೆ ಪ್ರಧಾನಿಯಾಗುವ ನೈತಿಕತೆಯೇ ಇಲ್ಲ’ ಎಂದು ಸಿಎಂ ಕಿಡಿ ಕಾರಿದ್ದಾರೆ.
ರಾಜ್ಯದ ಅನ್ನ ಭಾಗ್ಯ ಯೋಜನೆ ಅಕ್ಕಿ ನೀಡಲು ಕೇಂದ್ರವೇ ಹಣ ನೀಡುತ್ತಿದೆ ಎನ್ನುತ್ತಾರೆ. ಹಾಗಿದ್ದರೆ ಬಿಜೆಪಿ ಅಧಿಕಾರದಲ್ಲಿರುವ ಯಾವುದಾದರೂ ರಾಜ್ಯದಲ್ಲಿ ಉಚಿತ ಅಕ್ಕಿ ನೀಡುವ ಯೋಜನೆ ಯಾಕಿಲ್ಲ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಕೆಲವರು ಸುಳ್ಳು ಹೇಳುವುದನ್ನೇ ಕಸುಬು ಮಾಡಿಕೊಂಡಿದ್ದಾರೆ. ಆದರೆ ನಾನು ಮತ್ತು ನನ್ನ ಸರ್ಕಾರದ ಮಂತ್ರಿಗಳು ಸುಳ್ಳು ಹೇಳಲ್ಲ. ನಾವು ಮಾಡಿದ ಕೆಲಸಗಳನ್ನು ಮಾತ್ರ ಹೇಳಲು ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ