Publish Date: Sat, 25 Nov 2017 (09:38 IST)
Updated Date: Sat, 25 Nov 2017 (09:44 IST)
ಬೆಂಗಳೂರು: ಸಚಿವ ಕೆಜೆ ಜಾರ್ಜ್ ಎಂದರೆ ಸಿಎಂ ಸಿದ್ದರಾಮಯ್ಯಗೆ ಎಷ್ಟು ಆಪ್ತರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಇದೀಗ ಜಾರ್ಜ್ ಪುತ್ರನ ಮೇಲೂ ಸಿಎಂ ಒಲವು ತೋರಿದ್ದಾರೆ.
ಹಿಂದೊಮ್ಮೆ ಅರಣ್ಯ ಪ್ರದೇಶದಲ್ಲಿ ಗುಂಡಿನ ಪಾರ್ಟಿ ನಡೆಸಿ ಕೆಂಗಣ್ಣಿಗೆ ಗುರಿಯಾಗಿದ್ದ ಜಾರ್ಜ್ ಪುತ್ರ ರಾಣಾಗೆ ಈಗ ಮತ್ತೆ ಅದೇ ತಪ್ಪು ಮಾಡಲು ಸಿಎಂ ಅನುವು ಮಾಡಿಕೊಟ್ಟಿದ್ದಾರೆ.
ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವಾಲಯದ ವಿರೋಧವಿದ್ದರೂ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಜಾಲಿ ರೈಡ್ ಮಾಡಲು ರಾಣಾಗೆ ಸ್ವತಃ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ