Publish Date: Sat, 17 Mar 2018 (09:36 IST)
Updated Date: Sat, 17 Mar 2018 (09:38 IST)
ನವದೆಹಲಿ: ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ನ್ಯಾಯಮಂಡಳಿ ರಚನೆ ಕುರಿತು ಸಮಾಲೋಚನೆ ನಡೆಸಲು ಸಭೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಂಸದರ ಸಭೆ ಕರೆದಿದ್ದ ಸಿಎಂ ಸಿದ್ದರಾಮಯ್ಯ ಸಭೆ ರದ್ದುಗೊಳಿಸಿದ್ದಾರೆ.
ಇದು ವಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ‘ಸಿಎಂಗೆ ರಾಜಕೀಯವೇ ದೊಡ್ಡದಾಗಿದೆ. ಕಾವೇರಿ ವಿವಾದಂತಹ ಗಂಭೀರ ವಿಷಯಗಳನ್ನು ಸಮಾಲೋಚಿಸಲು ಪುರುಸೊತ್ತೇ ಇಲ್ಲ’ ಎಂದು ಟೀಕಿಸಿದ್ದಾರೆ.
ಆದರೆ ಎಚ್ ಡಿ ದೇವೇಗೌಡ ಸೇರಿದಂತೆ ಕೆಲವು ಸಂಸದರು ಮಾರ್ಚ್ 16 ರಂದು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದಿದ್ದಕ್ಕೆ ಸಭೆ ರದ್ದುಗೊಳಿಸಲಾಗಿತ್ತು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ