Publish Date: Thu, 19 Apr 2018 (07:26 IST)
Updated Date: Thu, 19 Apr 2018 (07:27 IST)
ಬೆಂಗಳೂರು: ತಮ್ಮ ಮೇಲೆ ಕೊಲೆ ಆರೋಪ ಹೊರಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.
ರಾಣೆಬೆನ್ನೂರಿನಲ್ಲಿ ತಮ್ಮ ಬೆಂಗಾವಲು ವಾಹನದ ಮೇಲೆ ನಡೆದ ಅಪಘಾತದ ಹಿಂದೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಂಚಿದೆ ಎಂದು ಅನಂತ ಕುಮಾರ್ ಹೆಗ್ಡೆ ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ‘ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ಸಂಘರ್ಷ ನಡೆಯುತ್ತಿದೆ. ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಬಿಎಸ್ ಯಡಿಯೂರಪ್ಪನವರನ್ನೇ ಹಿಂದಿಕ್ಕಲು ಅನಂತ ಕುಮಾರ್ ಹೆಗ್ಡೆ ಮತ್ತು ಪ್ರತಾಪ್ ಸಿಂಹ ಅವರಂತಹ ನಾಯಕರು ಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಬಿಎಸ್ ವೈ ಅವರನ್ನು ಮೂಲೆಗುಂಪು ಮಾಡಲು ಹೆಗ್ಡೆಯಂತಹ ನಾಯಕರು ಸಣ್ಣ ಅಪಘಾತವನ್ನೇ ದೊಡ್ಡದು ಮಾಡುತ್ತಿದ್ದಾರೆ’ ಎಂದು ಸಿಎಂ ಕೆಂಡಾಮಂಡಲರಾಗಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.