Publish Date: Wed, 18 Apr 2018 (09:35 IST)
Updated Date: Wed, 18 Apr 2018 (09:36 IST)
ಬೆಂಗಳೂರು: ಉತ್ತರ ಕನ್ನಡ ಸಂಸದ, ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಕಾರು ಅಪಘಾತಕ್ಕೀಡಾಗಿದ್ದು, ಸಚಿವರು ಇದು ನನ್ನ ಮೇಲೆ ಕೊಲೆ ನಡೆಸುವ ಉದ್ದೇಶದಿಂದ ನಡೆಸಿರುವ ಪೂರ್ವಯೋಜಿತ ಘಟನೆ ಎಂದಿದ್ದಾರೆ.
ನಿನ್ನೆ ತಡರಾತ್ರಿ 11.30 ರ ಸುಮಾರಿಗೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಸಾಗುತ್ತಿದ್ದಾಗ ಸಚಿವರ ಬೆಂಗಾವಲು ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದು ಕಾರು ಜಖಂಗೊಂಡಿದೆ. ಇದು ಉದ್ದೇಶಪೂರ್ವಕ ಕೃತ್ಯ ಎಂದು ಸಚಿವರು ಆಪಾದಿಸಿದ್ದರು.
ಇದೀಗ ಸಂಸದ ಪ್ರತಾಪ್ ಸಿಂಹ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಸಿದ್ದರಾಮಯ್ಯನವರೇ ನಿಮಗೆ ಸಚಿವರ ವಿರುದ್ಧ ಧ್ವೇಷವಿದ್ದರೆ ಅದನ್ನು ರಾಜಕೀಯವಾಗಿ ತೋರಿಸಿ. ಈ ರೀತಿ ಕೃತ್ಯಕ್ಕೆ ಕೈ ಹಾಕಬೇಡಿ. ಹೀಗೆ ಮಾಡಿದರೆ ನಾವು ಸುಮ್ಮನಿರಲ್ಲ. ಬೀದಿಗಿಳಿದು ಹೋರಾಟ ನಡೆಸುತ್ತೇವೆ. ಆಗ ನಿಮ್ಮನ್ನು ಕಾಪಾಡುವವರು ಯಾರೂ ಇರಲ್ಲ’ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Wed, 18 Apr 2018 (09:35 IST)
Updated Date: Wed, 18 Apr 2018 (09:36 IST)