Publish Date: Thu, 19 Apr 2018 (07:21 IST)
Updated Date: Thu, 19 Apr 2018 (07:24 IST)
ಬೆಂಗಳೂರು: ರಾಣೆ ಬೆನ್ನೂರು ತಾಲೂಕಿನಲ್ಲಿ ಮಂಗಳವಾರ ತಡರಾತ್ರಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಕಾರಿಗೆ ಟ್ರಕ್ ಒಂದು ಗುದ್ದಿ ಸಂಭವಿಸಿರುವ ಅಪಘಾತದ ಬಗ್ಗೆ ಸ್ವತಃ ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾತ್ರಿ ಸಂಭವಿಸಿರುವ ಆ ಘಟನೆ ಬೇರೇನನ್ನೋ ಸೂಚಿಸ್ತಿದೆ. ಕಣ್ಣೆದುರೇ ನಡೆಯುವ ಹತ್ಯೆಯನ್ನು ಸಹಜ ಸಾವು ಎನ್ನುವ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?’ ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಸಚಿವ ಅನಂತ ಕುಮಾರ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.
‘ಘಟನೆ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದೇನೆ. ಆದರೆ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ ಎಂದು ನನಗಿಸುತ್ತಿಲ್ಲ. ಈ ವಿಚಾರವನ್ನು ರಾಜ್ಯದ ಜನರಿಗೆ ಬಿಡುತ್ತಿದ್ದೇನೆ’ ಎಂದು ಅನಂತ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.