Select Your Language

Notifications

webdunia
webdunia
webdunia
webdunia

ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗೆ ಸಚಿವರಿಂದ ಆಕ್ರೋಶ: ಬೇಸರದಿಂದ ಸಿದ್ದರಾಮಯ್ಯ ಹೇಳಿದ್ದೇನು

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 19 ಸೆಪ್ಟಂಬರ್ 2025 (10:21 IST)
ಬೆಂಗಳೂರು: ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗಳ ಸೃಷ್ಟಿ ಮಾಡಿದ್ದಕ್ಕೆ ಸಚಿವರಿಂದಲೇ ವಿರೋಧ ವ್ಯಕ್ತವಾಗಿದ್ದ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದು ಆಪ್ತರ ಬಳಿ ನೋವು ಹಂಚಿಕೊಂಡಿದ್ದಾರೆ.

ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹೊಸ ಜಾತಿಗಳ ಸೃಷ್ಟಿಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಶೇಷವಾಗಿ ಲಿಂಗಾಯ ಸಮುದಾಯಕ್ಕೆ ಸೇರಿದ ಸಚಿವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಸ್ವತಃ ಡಿಕೆ ಶಿವಕುಮಾರ್ ಸೇರಿದಂತೆ ಪ್ರಬಲ ಸಚಿವರೇ ವಿರೋಧ ವ್ಯಕ್ತಪಡಿಸಿದ್ದರು.

ಹೀಗಾಗಿ ಬೇಸರಗೊಂಡ ಸಿಎಂ ಸಿದ್ದರಾಮಯ್ಯ ನನ್ನನ್ನು ಜಾತಿವಾದಿ ಎಂಬಂತೆ ಬಿಂಬಿಸುತ್ತಿದ್ದಾರೆ. ನನ್ನನ್ನು ಮೇಲ್ಜಾತಿಯವರ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಸಂಪುಟ ಸಭೆಯಲ್ಲಿ ಸಚಿವರು ಟೇಬಲ್ ಕುಟ್ಟಿ ಮಾತನಾಡಿರುವುದು ಸಿಎಂ ಸಿದ್ದರಾಮಯ್ಯಗೆ ಶಾಕ್ ತಂದಿದೆ. ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟು ಸಿಎಂ ಕೈ ಸುಟ್ಟುಕೊಂಡಿದ್ದರು. ಈಗ ಜಾತಿಗಣತಿ ವಿಚಾರದಲ್ಲಿ ಅವರು ಸ್ವಪಕ್ಷೀಯರಿಂದಲೇ ವಿರೋಧ ಎದುರಿಸುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗಳ ಸೇರ್ಪಡೆ: ಯಾರು ಹೇಳಿದ್ರೂ ಕೇಳದ ಸಿಎಂ ಕೊನೆಗೂ ಬಗ್ಗಿದ್ದು ಹೇಗೆ