Publish Date: Mon, 16 Feb 2026 (09:39 IST)
Updated Date: Mon, 16 Feb 2026 (09:41 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಸಿದ್ದರಾಮಯ್ಯ ಬಣದ ಬಹುತೇಕ ಶಾಸಕರು ಫಾರಿನ್ ಟೂರ್ ನಡೆಸುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಒಂದೆಡೆ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಅವರ ಬೆಂಬಲಿಗರು ಡಿಕೆ ಸಿಎಂ ಆಗಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇದರ ನಡುವೆಯೇ ಈಗ ಸಿಎಂ ಬಣದ ಶಾಸಕರು ವಿದೇಶ ಪ್ರವಾಸ ನಡೆಸುತ್ತಿರುವುದು ಇದೇ ಒತ್ತಡದ ತಂತ್ರವಾ ಎಂಬ ಅನುಮಾನ ಮೂಡಿಸಿದೆ.
ಅಧ್ಯಯನ ಪ್ರವಾಸ ಎಂಬ ನೆಪದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗೆ ಸಿಎಂ ಬಣದ 27 ಶಾಸಕರು ಪ್ರವಾಸ ಮಾಡಲಿದ್ದಾರೆ. ಹೈಕಮಾಂಡ್ ಸೂಚನೆಯಿದ್ದರೂ ವಿದೇಶ ಪ್ರವಾಸ ಮಾಡುತ್ತಿರುವುದು ಯಾಕೆ ಎನ್ನುವುದೇ ಪ್ರಶ್ನೆಯಾಗಿದೆ.
ಬಿಎಂ ನಾಗರಾಜು, ರಾಘವೇಂದ್ರ ಹಿಟ್ನಾಳ್, ಯಶವಂತರಾಯಗೌಡ, ಅಲ್ಲಮಪ್ರಭು ಪಾಟೀಲ್, ಪುಟ್ಟರಂಗಶೆಟ್ಟಿ, ಬಿಆರ್ ಪಾಟೀಲ್, ಎಆರ್ ಕೃಷ್ಣಮೂರ್ತಿ ಮೊದಲಾದ ಘಟಾನುಘಟಿ ನಾಯಕರು ವಿದೇಶ ಪ್ರವಾಸ ಮಾಡುವ ಶಾಸಕರ ಲಿಸ್ಟ್ ನಲ್ಲಿದ್ದಾರೆ.