ಬಾಡಿಗೆ ಮನೆಯಲ್ಲಿದ್ದೀನಿ ಅನ್ನುವ ಸಿದ್ದರಾಮಯ್ಯ ಮಗ, ಸೊಸೆ ಹೆಸರಿನಲ್ಲಿ ಪಬ್ ನಡೆಸ್ತಿದ್ದಾರೆ

Krishnaveni K
ಬುಧವಾರ, 23 ಅಕ್ಟೋಬರ್ 2024 (16:22 IST)
ಬೆಂಗಳೂರು: ಬಾಡಿಗೆ ಮನೆಯಲ್ಲಿದ್ದೀನಿ ಎನ್ನುವ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ತಮ್ಮ ಮಗ, ಸೊಸೆ ಹೆಸರಿನಲ್ಲಿ ಪಬ್ ನಡೆಸ್ತಿದ್ದಾರೆ ಎಂದು ಎಂಎಲ್ ಸಿ ಎಚ್ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ವರುಣಾ ಕ್ಷೇತ್ರದಲ್ಲಿ 500 ಕೋಟಿ ರೂ.ಗಳ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ನಾನು ಸ್ವಂತ ಲಾಭಕ್ಕೆ ಒಂದೇ ಒಂದು ಪೈಸೆ ದುಡ್ಡು ಮಾಡಿಲ್ಲ. ಈಗಲೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂದಿದ್ದರು. ಸಿಎಂ ಹೇಳಿಕೆಗೆ ಈಗ ವಿಶ್ವನಾಥ್ ವ್ಯಂಗ್ಯ ಮಾಡಿದ್ದಾರೆ.

ನನಗೆ ಮನೆಯಿಲ್ಲ, ಮರಿಸ್ವಾಮಿ ಮನೆಯಲ್ಲಿದ್ದೇನೆ ಎನ್ನುವುದೆಲ್ಲಾ ಸಿದ್ದರಾಮಯ್ಯ ನಾಟಕ. ಸಿದ್ದರಾಮಯ್ಯ ಎಂಥಾ ಭ್ರಷ್ಟ ಎನ್ನುವುದನ್ನು ಈಗ ಜನ ಅರ್ಥ ಮಾಡಿಕೊಂಡಿದ್ದಾರೆ. ಅವರು ನಾನು ಒಳ್ಳೆಯವನು ಎಂದು ಡಂಗೂರ ಹೊಡಿಸುತ್ತಿದ್ದಾರೆ. ವರುಣಾದಲ್ಲಿ 500 ಕೋಟಿ ರೂ. ಯೋಜನೆ ಎಲ್ಲಾ ನೆಪ ಅಷ್ಟೇ. ನಾನು ಸಾಚಾ ಎಂದು ತೋರಿಸಿಕೊಳ್ಳಲು ಮಾಡಿದ ಕಾರ್ಯಕ್ರಮ ಎಂದು ವಿಶ್ವನಾಥ್ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಗ, ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಇದಕ್ಕೆಲ್ಲಾ ಸಚಿವ ಭೈರತಿ ಸುರೇಶ್ ಮಾಸ್ಟರ್ ಮೈಂಡ್. ಅವರ ಕ್ಷೇತ್ರದಲ್ಲೇ ಪಬ್ ಇದೆ ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ನಾನೂ ಅವರ ಪಾರ್ಟಿಗಳಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ಎಂದೂ ನನ್ನ ಅಜೆಂಡಾ ಬಿಟ್ಟಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗಲು ಯಡಿಯೂರಪ್ಪ ಹಾದಿ ಹಿಡಿದರಾ ಡಿಕೆ ಶಿವಕುಮಾರ್: ರಾತ್ರೋ ರಾತ್ರಿ ಮಾಡಿದ್ದೇನು

Karnataka Weather: ವಾರಂತ್ಯದಲ್ಲಿ ಕರ್ನಾಟಕದ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಮುಂದಿನ ಸುದ್ದಿ
Show comments