Select Your Language

Notifications

webdunia
webdunia
webdunia
webdunia

ಹೆಚ್.ಡಿ.ದೇವೇಗೌಡರ ಆರೋಪಕ್ಕೆ ತೀರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಹೆಚ್.ಡಿ.ದೇವೇಗೌಡರ ಆರೋಪಕ್ಕೆ ತೀರುಗೇಟು ನೀಡಿದ  ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 6 ಏಪ್ರಿಲ್ 2018 (08:07 IST)
ಬೆಂಗಳೂರು : ನೀತಿ ಸಂಹಿತೆ ಜಾರಿಯಾದ ಬಳಿಕವೂ  ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ತಮಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಹೆಚ್.ಡಿ.ದೇವೇಗೌಡರು ಮಾಡಿರುವ ಆರೋಪಕ್ಕೆ  ಇದೀಗ ಸಿಎಂ ಸಿದ್ದರಾಮಯ್ಯ ಅವರು ತೀರುಗೇಟು ನೀಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ  ಸಿಎಂ ಸಿದ್ದರಾಮಯ್ಯ ಅವರು,’ ನೀತಿ ಸಂಹಿತೆ ಜಾರಿ ಆದ ಬಳಿಕ ಯಾರು ನಮ್ಮ ಮನೆಗೆ ಬಂದಿಲ್ಲ. ಮುಖ್ಯ ಕಾರ್ಯದರ್ಶಿ ಬಿಟ್ಟು ಬೇರೆಯಾರು ಬಂದಿಲ್ಲ. ಪಿಎಂ ಆದಾಗ ಅವರು ಮಾಡಿರಬೇಕು. ಹೀಗಾಗಿ ಆ ರೀತಿ ಮಾತನಾಡಿದ್ದಾರೆ’ ಎಂದಿದ್ದಾರೆ.


‘ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಭ್ರಮಾಲೋಕದಲ್ಲಿ ಇದ್ದಾರೆ. ಇವರೆಲ್ಲ ಭ್ರಮಾಲೋಕದಲ್ಲಿ ತೇಲಾಡೋದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ. ನನ್ನನ್ನು ಸೋಲಿಸಲು ಮತ್ತೊಮ್ಮೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಈಗ ಒಂದಾಗಿರಬೇಕು. 2006 ರಲ್ಲಿ ನನ್ನನ್ನು ಸೋಲಿಸಲು ಒಂದಾಗಿದ್ದರು. ಆಗ ಏನಾಯಿತು? ಚುನಾವಣೆಯಲ್ಲಿ ನಾನು ಗೆದ್ದಿದ್ದೆ. ಈಗ ಮತ್ತೆ ನಾನೇ ಗೆಲ್ಲೋದು. ನನ್ನನ್ನು ಸೋಲಿಸುವುದೇ ಅವರ ಗುರಿ ಅಂತೆ. ನಮಗೂ ಸೋಲಿಸುವುದು ಗೊತ್ತು. ಮತ ಕೊಡುವುದು ಮತದಾರರು ಅನ್ನುವುದನ್ನು ಮರೆಯುವುದು ಬೇಡ ಎಂದು ಇಬ್ಬರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಕಳ್ಳ ಸಾಗಣೆಯಲ್ಲಿ ಪಾಕಿಸ್ತಾನಿಯರ ಸಂಖ್ಯೆ ಹೆಚ್ಚಳ; ದುಬೈ ರಾಷ್ಟ್ರಗಳಿಗೆ ಅಪಾಯ!