ಬೆಂಗಳೂರು: ನಮ್ಮ ತಂದೆ ಮೈಸೂರು ಅಭಿವೃದ್ಧಿ ವಿಚಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತಲೂ ಗ್ರೇಟ್ ಅಂತೆ ಎಂದು ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಹೇಳಿಕೆ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯನವರನ್ನು ಕೇಳಿದ್ದಕ್ಕೆ ಅವರ ಉತ್ತರ ಏನಿತ್ತು ಗೊತ್ತಾ?
ಮೈಸೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನಿಲ್ಲ ಎಂಬ ಬಿಜೆಪಿ ಟೀಕೆಗೆ ಉತ್ತರಿಸಿದ್ದ ಡಾ ಯತೀಂದ್ರ ನಮ್ಮ ತಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತಲೂ ಗ್ರೇಟ್. ಅವರಿಗಿಂತ ಹೆಚ್ಚು ಮೈಸೂರಿನ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ ಎಂದಿದ್ದರು.
ಅವರ ಹೇಳಿಕೆ ಈಗ ಭಾರೀ ಟೀಕೆಗೆ ಗುರಿಯಾಗಿದೆ. ಸ್ವತಃ ಮೈಸೂರು ರಾಜವಂಶಸ್ಥ, ಬಿಜೆಪಿ ಸಂಸದ ಯದುವೀರ್ ಒಡೆಯರ್ ಮಹಾರಾಜರು ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಟೀಕೆ ಮಾಡುವುದು ಬಿಟ್ಟು ಜನರ ಸಮಸ್ಯೆ ಪರಹರಿಸಲಿ ಎಂದು ತಿರುಗೇಟು ಕೊಟ್ಟಿದ್ದರು.
ಇಂದು ಪುತ್ರನ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿಕ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಲು ಕೊಂಚ ತಡವರಿಸಿದ ಅವರು ಬಿಜೆಪಿಯವರಿಗಿಂತ ಹೆಚ್ಚು ನಾವು ಅಭಿವೃದ್ಧಿ ಮಾಡಿದ್ದೇವೆ ಎಂದಷ್ಟೇ ಉತ್ತರಿಸಿದ್ದಾರೆ.