ಬೆಂಗಳೂರು: ಮೈಸೂರು ಮಹಾರಾಜರಿಗಿಂತಲೂ ನಮ್ಮಪ್ಪ ಗ್ರೇಟ್ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಹೊಗಳಿಕೊಂಡಿದ್ದಾರೆ.
ನಾಡ ಕಟ್ಟಿದ ದೊರೆ ಎಂದೇ ಪ್ರಸಿದ್ಧರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತಲೂ ತಮ್ಮ ತಂದೆಯೇ ಶ್ರೇಷ್ಠ ಆಡಳಿತಗಾರ ಎಂದು ಯತೀಂದ್ರ ಸಿದ್ದರಾಮಯ್ಯ ಹೊಗಳಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ತಂದೆ ನಾಲ್ವಡಿ ಒಡೆಯರ್ ಅವರನ್ನೂ ಮೀರಿದ್ದಾರೆ ಎಂದಿದ್ದಾರೆ.
ನಾಡ ಕಟ್ಟಿದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ಕೊಡುವ ಭರದಲ್ಲಿ ಅವರು ಈ ರೀತಿ ಹೊಗಳಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಬಿಟ್ಟರೆ ಅವರಷ್ಟೇ ಕೊಡುಗೆ ನೀಡಿ ಮೈಸೂರು ಅಭಿವೃದ್ಧಿ ಪಡಿಸಿದ್ದು ಸಿದ್ದರಾಮಯ್ಯ ಮಾತ್ರ ಎಂದಿದ್ದಾರೆ. ಅವರ ಈ ಹೋಲಿಕೆ ಸಾಕಷ್ಟು ಪರ-ವಿರೋಧ ಚರ್ಚೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ.