Publish Date: Tue, 24 Jun 2025 (14:07 IST)
Updated Date: Tue, 24 Jun 2025 (14:10 IST)
ನವದೆಹಲಿ: ದೆಹಲಿಗೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯಗೆ ಅಕಸ್ಮಾತ್ತಾಗಿ ಬಾಲಿವುಡ್ ನಟ ಅಮೀರ್ ಖಾನ್ ಎದುರಾಗಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಕುಶಲೋಪರಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರು, ರಾಷ್ಟ್ರಪತಿಗಳ ಭೇಟಿಗೆಂದು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳಿಗೆ ಹಣಕಾಸಿನ ನೆರವು ಕೇಳಲಿದ್ದಾರೆ. ಇನ್ನು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಕೆಲವು ಮಸೂದೆಗಳಿಗೆ ಅಂಕಿತ ಪಡೆಯಲು ಮುಂದಾಗಿದ್ದಾರೆ.
ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ವೇಳೆ ಅಮೀರ್ ಖಾನ್ ಅಕಸ್ಮಾತ್ತಾಗಿ ಎದುರಾಗಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಕೈಕುಲುಕಿ ಶುಭಾಶಯ ತಿಳಿಸಿದ್ದಾರೆ. ಇನ್ನು ಅಮೀರ್ ಖಾನ್ ಭೇಟಿ ಬಗ್ಗೆ ಸಿಎಂ ಎಕ್ಸ್ ಪೇಜ್ ನಲ್ಲಿ ಫೋಟೋ ಪ್ರಕಟಿಸಿದ್ದು ಸಂವೇದನಾಶೀಲ ನಟ ಎಂದು ಬರೆದುಕೊಂಡಿದ್ದಾರೆ.
ಇದನ್ನು ಕೆಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಈ ಸಂವೇದನಾ ಶೀಲ ನಟ ಎಂದರೆ ಏನು ಸಾರ್? ಉಳಿದವರಿಗೆ ಸಂವೇದನೆ ಎನ್ನುವುದು ಇಲ್ಲವೇ? ಕೇವಲ ಬಾಲಿವುಡ್ ನಟರಿಗೆ ಮಾತ್ರ ಇರೋದಾ ಎಂದು ಕಾಲೆಳೆದಿದ್ದಾರೆ.