Select Your Language

Notifications

webdunia
webdunia
webdunia
webdunia

ದೇವಸ್ಥಾನಗಳ ಹಿಂದೂಗಳಿಗೆ ಮಾತ್ರ: ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 23 ಫೆಬ್ರವರಿ 2024 (10:40 IST)
ಬೆಂಗಳೂರು: ದೇವಸ್ಥಾನಗಳ ಹಣವನ್ನು ಹಿಂದೂಯೇತರ ಸಮುದಾಯಗಳಿಗೆ ಬಳಕೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಅಧಿವೇಶನದಲ್ಲಿ ಹಿಂದೂ ದೇವಾಲಯಗಳು ಮತ್ತು ಸಂಸ್ಥೆಗಳ ಆದಾಯದ ಮೇಲೆ 10% ತೆರಿಗೆ ವಿಧಿಸುವ ಮಸೂದೆ ಪಾಸ್ ಮಾಡಿದ ಬಳಿಕ ಸಿದ್ದು ಸರ್ಕಾರ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ವಿಪಕ್ಷ ಬಿಜೆಪಿ ಸಿದ್ದು ಸರ್ಕಾರ ಮತ್ತೊಮ್ಮೆ ಹಿಂದೂ ವಿರೋಧಿ ಎಂದು ಪ್ರೂವ್ ಮಾಡಿದೆ ಎಂದು ಆರೋಪಿಸಿತ್ತು.

ಇದರ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ವಿವಾದಗಳಿಗೆ ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ. ಬಿಜೆಪಿ ನಾಯಕರು ಅಮಾಯಕ ಹಿಂದೂಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕಾರಣಗಳಿಗೆ ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ. ಹಿಂದೂ ದೇವಾಲಯಗಳ ಹಣವನ್ನು ಬೇರೆ ಸಮುದಾಯದವರಿಗೆ ಬಳಕೆ ಮಾಡಲ್ಲ ಎಂದಿದ್ದಾರೆ.

‘ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಮಾತ್ರ ಬಳಸಲಾಗುತ್ತದೆ’ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.  2003 ರಲ್ಲಿ ಈ ಬಗ್ಗೆ ಕಾಯಿದೆ ಜಾರಿಗೆ ಬಂದ ನಂತರ ಹಿಂದೂ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಬೇರೆ ಯಾವುದೇ ದರ್ಮದ ಅನುಕೂಲಕ್ಕೆ ಬಳಕೆ ಮಾಡಲಾಗುತ್ತಿಲ್ಲ. ಅದನ್ನು ಈ ಕಾಯಿದೆಯಲ್ಲೂ ಒತ್ತಿ ಹೇಳಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದಕ್ಕೆ ಮೊದಲು 10 ಲಕ್ಷ ರೂ. ಮೀರಿ ಆದಾಯ ಬರುವ ದೇವಾಲಯಗಳಿಗೆ ಶೇ.10 ರಷ್ಟು ತೆರಿಗೆ ಪಡೆಯಲಾಗುತ್ತಿತ್ತು. ಇದೀಗ ತಿದ್ದುಪಡಿ ನಂತರ 1 ಕೋಟಿ ರೂ. ಮೀರಿ ಆದಾಯ ಬರುವ ದೇವಾಲಯಗಳಿಂದ ಶೇ.10 ರಷ್ಟು ಸುಂಕ ಸಂಗ್ರಹಿಸಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ಬಿಆರ್ ಎಸ್ ಶಾಸಕಿ ನಂದಿತಾ ಸಾವು