ಬೆಂಗಳೂರು-ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದರು. ಅದರಂತೆ ಕನ್ಸೂಮರ್ ಕಾನ್ಫಿಡೆನ್ಸ್ ಇಂಡೆಕ್ಸ್ ಪ್ರಕಾರ ಮಾಸಿಕ 5000ಕ್ಕಿಂತ ಕಡಿಮೆ ವರಮಾನ ಇರುವವರು ಶೇ.61.6 ಜನರಿದ್ದು, ಹಿಂದಿನ ವರ್ಷಗಳಿಗಿಂತ ಈ ಪರಿಸ್ಥಿತಿ ಹಾಳಾಗಿದೆ ಎಂದು ಆರ್‌ಬಿಐ ವರದಿ ಹೇಳುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯವರ ಹಸಿವಿನ ಸೂಚ್ಯಂಕದಲ್ಲಿ 2023ರಲ್ಲಿ 125 ದೇಶಗಳ ಪಟ್ಟಿಯಲ್ಲಿ ಭಾರತ 115 ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದರು.
ಇನ್ನೂ ಈ ವೇಳೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಈ ಎಲ್ಲ ಅಂಕಿ ಅಂಶಗಳು ಕಾಂಗ್ರೆಸ್‌ನದ್ದೂ ಅಲ್ಲ; ಸಿದ್ದರಾಮಯ್ಯ ಅವರದ್ದೂ ಅಲ್ಲ. ಈ ಸರಕಾರದಲ್ಲಿ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವ ದೇಶದ್ರೋಹಿಗಳದ್ದಾಗಿದೆ. ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುವುದೇ ಅವರ ಕೆಲಸ ಎಂದು ಆರೋಪಿಸಿದರು.