Publish Date: Fri, 01 Dec 2017 (18:30 IST)
Updated Date: Fri, 01 Dec 2017 (18:33 IST)
ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಸಿಎಂ ಸಿದ್ದರಾಮಯ್ಯಗೆ ಅರ್ಹತೆಯಿಲ್ಲ ಅವರೊಬ್ಬ ಬಚ್ಚಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಯಡಿಯೂರಪ್ಪ ಯಾವ ಹೋರಾಟದಿಂದ ಬಂದಿದ್ದಾರೆ. ಅವರ ಹತ್ರ ಯಾವ ಐಡಿಯಾಲಾಜಿ ಇದೆ? ಜೈಲಿಗೆ ಹೋಗಿ ಬಂದವರು ನನಗೆ ಪಾಠ ಹೇಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ 15 ದಿನಗಳೊಳಗಾಗಿ ಮಹಾದಾಯಿ ವಿವಾದವನ್ನು ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ 15 ದಿನ ಕಾದು ನೋಡುತ್ತೇನೆ. ನಂತರ ನಾನು ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
ಪ್ರಧಾನಿ ಮೋದಿ ಸರಕಾರದಿಂದಾಗಿ ದೇಶ ಕತ್ತಲೆಯತ್ತ ಸಾಗುತ್ತಿದೆ. ಆರ್ಥಿಕತೆ ಕುಸಿದು ಹದಗೆಟ್ಟು ಹೋಗಿದೆ. ಬಡವರು, ಶೋಷಿತರು, ದೀನ ದಲಿತರು, ರೈತರಿಗಾಗಿ ಯಾವುದೇ ಯೋಜನೆಗಳಿಲ್ಲ. ಇಂತಹ ಸರಕಾರ ಬೇಕಾ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.