Select Your Language

Notifications

webdunia
webdunia
webdunia
webdunia

ಸಿಎಂ ಜನತಾ ದರ್ಶನದಲ್ಲಿ ಇವನ್ನು ತರಲೇಬೇಕು..!

ಸಿಎಂ ಜನತಾ ದರ್ಶನದಲ್ಲಿ ಇವನ್ನು ತರಲೇಬೇಕು..!
ಕಲಬುರಗಿ , ಶುಕ್ರವಾರ, 21 ಜೂನ್ 2019 (15:03 IST)
ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು  ಜೂನ್ 22 ರಂದು ಕಲಬುರಗಿ ತಾಲೂಕಿನ ಹೇರೂರ (ಬಿ) ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಮನವಿ ಇವನ್ನೂ ತರಬೇಕು. ಹೀಗಂತ ಡಿಸಿ ಸೂಚನೆ ನೀಡಿದ್ದಾರೆ.

ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನಲೆಯಲ್ಲಿ ಹೆರೂರು (ಬಿ) ಗ್ರಾಮದ ಹುಲಿಕಂಠೇಶ್ವರ ದೇವಸ್ಥಾನದ ಹತ್ತಿರದ ಆವರಣದಲ್ಲಿ ಜೂನ್ 22 ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿಗಳನ್ನು ಸ್ವೀಕರಿಸುವರು.

ಮನವಿ ಸಲ್ಲಿಸುವ ಸಾರ್ವಜನಿಕರು ಅರ್ಜಿಯೊಂದಿಗೆ ಆಧಾರ ಕಾರ್ಡ್ ಅಥವಾ ಯಾವುದಾದರೂ ವಿಳಾಸ ದೃಢೀಕರಿಸುವ ಗುರುತಿನ ಚೀಟಿಯನ್ನು ಸಲ್ಲಿಸಬೇಕು.  ಮೊಬೈಲ್ ನಂಬರ್‍ನ್ನು ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ ತಿಳಿಸಿದ್ದಾರೆ.

ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸಲು ಆಗಮಿಸುವ ಸಾರ್ವಜನಿಕರು ಅರ್ಜಿಯೊಂದಿಗೆ ಪೂರಕ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ  ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ಪ್ರತಿ ಅರ್ಜಿದಾರರಿಗೆ ಟೋನ್ ಸಂಖ್ಯೆಯನ್ನು ನೀಡಲಾಗುವುದು. ಸದರಿ ಸಂಖ್ಯೆಯನ್ನಾಧರಿಸಿ ಅರ್ಜಿಗಳ ಸ್ಥಿತಿಗತಿಯನ್ನು ಅರ್ಜಿದಾರರು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರದಲ್ಲಿ ಅದೇ ಇಲ್ಲ ಎಂದ ಡಿ.ಕೆ.ಶಿವಕುಮಾರ್