ದಾರಿ ಮಧ್ಯೆಯೇ ಬಾಲಕಿಯರ ಸಮಸ್ಯೆ ನಿವಾರಿಸಿದ ಸಿಎಂ ಕುಮಾರಸ್ವಾಮಿ

Webdunia
ಬುಧವಾರ, 26 ಜೂನ್ 2019 (12:09 IST)
ಬೆಂಗಳೂರು: ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡಲು ಬಸ್ ಮೂಲಕ ಪ್ರಯಾಣಿಸುವಾಗ ದಾರಿ ಮಧ್ಯೆಯೇ  ಸಿಎಂ ಕುಮಾರಸ್ವಾಮಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದಾರೆ.


ಸಿಎಂ ಪ್ರಯಾಣಿಸುತ್ತಿದ್ದ ಬಸ್ ಸುತ್ತ ಸುತ್ತುವರಿದ ವಿದ್ಯಾರ್ಥಿನಿಯರ ಪೈಕಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಮ್ಮ ಶಾಲೆಯ ಸಂಕಷ್ಟಗಳ ಬಗ್ಗೆ ಅಹವಾಲು ನೀಡಿದ್ದಾಳೆ. ಶಿಕ್ಷಕರ ಕೊರತೆ, ಹಾಸ್ಟೆಲ್ ಕೊರತೆ ಬಗ್ಗೆ ಮನದಟ್ಟು ಮಾಡಿದ್ದಾಳೆ.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ ತಕ್ಷಣವೇ ಹಾಸ್ಟೆಲ್ ಕಟ್ಟಿಸಿಕೊಡಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ಅಲ್ಲದೆ, ಶಿಕ್ಷಕರ ಕೊರತೆ ನೀಗಿಸಲೂ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ನಡುವೆ ಸಾರ್ವಜನಿಕರು ಪದವಿಪೂರ್ವ ಕಾಲೇಜು ಸ್ಥಾಪನೆಗೆ ಒತ್ತಾಯಿಸಿದಾಗ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸುವುದಾಗಿ ಭರವಸೆ ನೀಡಿದರು.

ಸಿಎಂ ಕುಮಾರಸ್ವಾಮಿ ಪ್ರಯಾಣಿಸುತ್ತಿರುವ ವಾಹನವನ್ನು ಅಲ್ಲಲ್ಲಿ ತಡೆಗಟ್ಟಿ ಸಾರ್ವಜನಿಕರು ತಮ್ಮ ದೂರು, ದುಮ್ಮಾನಗಳನ್ನು ಹೇಳುವ ದೃಶ್ಯ ಸಾಮಾನ್ಯವಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರ ಹಣ ದುರುಪಯೋಗ ಬೆನ್ನಲ್ಲೇ ಶೇ 50ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ರಾಜೀನಾಮೆ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆ, ಹೈಕೋರ್ಟ್‌ನಿಂತ ಬಂತು ಮಹತ್ವದ ಆದೇಶ

ಕಟೀಲಿನ ಮಹಾಲಕ್ಷ್ಮಿ ಆನೆಗೆ ಮಾವುತನನ್ನು ಒಂದು ಕ್ಷಣನೂ ಬಿಟ್ಟಿರಕ್ಕಾಗಲ್ಲ ನೋಡಿ, Video

ಕಳ್ಳತನ ಮಾಡಲು ಹೋಗಿ ಈ ರೀತಿ ಸಿಕ್ಕಾಕಿಕೊಳ್ಳುವುದಾ, Video

ದಕ್ಷಿಣ ಸ್ಪೇನ್‌ನಲ್ಲಿ ಕಾಡ್ಗಿಚ್ಚಿಗೆ ಕನಿಷ್ಠ 12 ಮಂದಿ ಬಲಿ

ಮುಂದಿನ ಸುದ್ದಿ
Show comments