ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದವರ್ಯಾರು ಗೊತ್ತಾ?

Webdunia
ಮಂಗಳವಾರ, 16 ಏಪ್ರಿಲ್ 2019 (09:33 IST)
ಮಂಡ್ಯ : ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆಯುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಆರ್ ನಗರದ ಬಾಚನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬರೀಶ್ ಸಾವಿನ ಕುರಿತ ಸಿ.ಎಂ ನೂರಕ್ಕೆ ನೂರರಷ್ಟು ಸುಳ್ಳು ಹೇಳಿದರೆ, ನಾನು ಏನು ಮಾಡಲಿ. ಕುಮಾರಸ್ವಾಮಿ ಅವರು ಮಗನನ್ನು ಗೆಲ್ಲಿಸೋಕೆ ಮನುಷ್ಯತ್ವವನ್ನೆ ಮರೆತ ಸಿಎಂ ಆಗಿದ್ದಾರೆ. ಬಹುಶಃ ತುಂಬಾ ವರ್ಷಗಳಿಂದ ರಾಜಕೀಯದಲ್ಲಿದ್ದರಿಂದ ಮನುಷ್ಯತ್ವವನ್ನ ಮರೆತಿದ್ದಾರೆ. ಕುಟುಂಬ ಸದಸ್ಯರನ್ನ ಕಳೆದುಕೊಂಡ ನೋವು ಅವರಿಗೆ ಗೊತ್ತಿಲ್ಲ. ಅವರಿಗೆ ಬರುವುದು ಬೇಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಅವರು ಕುಟುಂಬ ರಾಜಕಾರಣ ಮಾಡ್ತಿರೋದ್ರಿಂದ ಅವರ ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಕ್ಕೆ ಸಿ.ಎಂ ಹಾಗೆ ಮಾತಾಡುತ್ತಿದ್ದಾರೆ. ಸಿಎಂ ಮಗನ ಪರ ಪ್ರಚಾರ ಮಾಡಲಿ. ನನ್ನಲ್ಲಿ ಲೋಪವಿದ್ದರೆ ಜನ ಹೇಳುತ್ತಾರೆ. ನಾನು ಸ್ಪರ್ಧೆ ಮಾಡ್ತಿರೋದು ನಿಖಿಲ್ ವಿರುದ್ಧವೋ ಅಥವಾ ಕುಮಾರಸ್ವಾಮಿ ವಿರುದ್ಧವೋ ಗೊತ್ತಾಗುತ್ತಿಲ್ಲ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಪಿತೃವಿಯೋಗ: ಬೀದರ್‌ನ ಧೀಮಂತ ರಾಜಕಾರಣಿ ಭೀಮಣ್ಣ ಖಂಡ್ರೆ ಇನ್ನಿಲ್ಲ

Nipah Virus: ತಿಳಿದುಕೊಳ್ಳಲೇ ಬೇಕಾದ ಅಂಶಗಳು ಇಲ್ಲಿದೆ

ರಾಷ್ಟ್ರೀಯ ಪ್ಯಾರಾಲಿಂಪಿಕ್ ಪವರ್‌ಲಿಫ್ಟಿಂಗ್: ಪುಷ್ಕರ್ ಸಿಂಗ್ ಧಾಮಿ ಚಾಲನೆ

ಲಕ್ಕುಂಡಿ ನಿಧಿ ಪ್ರಕರಣ: ಗದಗದಲ್ಲಿ ಮಹತ್ವದ ಬೆಳವಣಿಗೆ

ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಬೆಂಗಳೂರು ಟು ಕೊಟ್ಟಾಯಂ ವಿಶೇಷ ರೈಲು

ಮುಂದಿನ ಸುದ್ದಿ
Show comments