ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಬಿಜೆಪಿ, ಕಾಂಗ್ರೆಸ್ ರಾಜಕೀಯ!

ಸೋಮವಾರ, 15 ಏಪ್ರಿಲ್ 2019 (07:49 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಈಗ ರಾಜಕೀಯ ಶುರುವಾಗಿದೆ. ಅದೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಎಂದು ಎರಡು ಭಾಗವಾಗಿದೆ.


ರವೀಂದ್ರ ಜಡೇಜಾ ಪತ್ನಿ ರಿವಾಬ ಬಿಜೆಪಿ ಸೇರಿದ ಬೆನ್ನಲ್ಲೇ ಜಡೇಜಾ ತಂದೆ ಮತ್ತು ಸಹೋದರಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಇದೀಗ ಜಡೇಜಾ ಮನೆಯಲ್ಲಿ ಎರಡು ಪಕ್ಷದ ನಾಯಕರು ಒಂದೇ ಮನೆಯಲ್ಲಿದ್ದಂತಾಗಿದೆ.

ಜಡೇಜಾ ತಂದೆ ಅನಿರುದ್ಧ್ ಸಿಂಹ್, ಸಹೋದರಿ ನೈನಬಾ ಕಾಂಗ್ರೆಸ್ ರ್ಯಾಲಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜಡೇಜಾ ಪತ್ನಿ ರಿವಾಬ ಮಾರ್ಚ್ 3 ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಓಟ್ ಮಾಡಿ ಎಂದು ಸಲಹೆ ಕೊಡುವ ರಾಹುಲ್ ದ್ರಾವಿಡ್ ಗೇ ಓಟ್ ಮಾಡಕ್ಕಾಗಲ್ಲ!