Publish Date: Tue, 16 Apr 2019 (06:59 IST)
Updated Date: Tue, 16 Apr 2019 (07:01 IST)
ಮಂಡ್ಯ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಹಿರಂಗ ಪ್ರಚಾರದ ಅಂತಿಮ ದಿನವಾದ ನಿನ್ನೆ ಮಂಡ್ಯ ರಣ ಕಣ ಕಾವೇರಿತ್ತು.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟರಾದ ಯಶ್ ಮತ್ತು ದರ್ಶನ್ ನಿನ್ನೆಯೂ ಬಿರುಸಿನ ಪ್ರಚಾರ ನಡೆಸಿದರೆ, ಅತ್ತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಿದರು.
ಚುನಾವಣಾ ರ್ಯಾಲಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಏಕವಚನ ಪ್ರಯೋಗ ಮಾಡಿದ ಸಿಎಂ ಕುಮಾರಸ್ವಾಮಿ ‘ಯಾವನೋ ಅವನು ಯಶ್? ನಮ್ಮಂಥಾ ನಿರ್ಮಾಪಕರಿದ್ದರೇ ಇವರೆಲ್ಲಾ ನಟರಾಗೋದು. ನನಗೆ ನೋವಾಗಬಾರದೆಂದು ಇವರೆಲ್ಲಾ ಏನೇ ಹೇಳಿದರೂ ನಮ್ಮ ಕಾರ್ಯಕರ್ತರು ಸುಮ್ಮನಿದ್ದಾರೆ. ಹಾಗಂತ ಹೆಚ್ಚು ನಾಲಿಗೆ ಹರಿಯಬಿಡುವುದು ಬೇಡ’ ಎಂದು ಯಶ್ ವಿರುದ್ಧ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ