Publish Date: Sat, 13 Apr 2019 (16:12 IST)
Updated Date: Sat, 13 Apr 2019 (16:14 IST)
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ವತಿಯಿಂದ ನಡೆದ ವೀರಶೈವ-ಲಿಂಗಾಯತ ಸಮಾವೇಶದಲ್ಲಿ ಖರ್ಗೆ ಪರ ಬ್ಯಾಟಿಂಗ್ ಮಾಡಲಾಯಿತು.
ಕಲಬುರಗಿಯಲ್ಲಿ ನಡೆದ ಸಮಾವೇಶವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ಪ್ರಧಾನಿ ಮೋದಿ ದೇಶದಲ್ಲಿ ಎಲ್ಲವನ್ನೂ ನಾನೇ ಕಿಸಿದಿದ್ದೇನೆ ಎನ್ನುತ್ತಾನೆ ಎಂದು ಲೇವಡಿ ಮಾಡಿದರು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯವರು ಕುರುಡರ ರೀತಿಯಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳ ಹುಡುಕಾಟ ನಡೆಸಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಮಾತನಾಡಿದ ವೀರಶೈವ-ಲಿಂಗಾಯತ ನಾಯಕರು ಖರ್ಗೆ ಪರ ಬ್ಯಾಟಿಂಗ್ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸೋತ ಪೈಲ್ವಾನ್ ಗಳು ಅವರೇ ಒಂದು ಸಂಘ ಕಟ್ಟಿಕೊಂಡು ನನ್ನ ಸೋಲಿಸಲು ನನ್ನ ಹಿಂದೆ ಬಿದ್ದಿದ್ದಾರೆ. ನನಗೆ ಸೋಲಿಸೋದು ಬಿಡೋದು ಜನತಾ ಜನಾರ್ಧನ ಅವರು ಏನು ತೀರ್ಮಾನ ತೊತೋತಾರೆ ಅದಕ್ಕೆ ಬದ್ಧ. ಇವರಿಂದ ಸೋಲಿಸಲು ಆಗಲ್ಲ ಎಂದು ಮಾಲಿಕಯ್ಯ ಗುತ್ತೇದಾರ್, ಬಾಬುರಾವ ಚಿಂಚನಸೂರಗೆ ಖರ್ಗೆ ಟಾಂಗ್ ಕೊಟ್ಟರು.