Select Your Language

Notifications

webdunia
webdunia
webdunia
webdunia

ಜೆಡಿಎಸ್ ಗೆ ಶಾಕ್: ಬಿಜೆಪಿ ಸೇರ್ಪಡೆಗೊಂಡ ತೆನೆ ಹೊತ್ತ ಮುಖಂಡರು

ಜೆಡಿಎಸ್ ಗೆ ಶಾಕ್: ಬಿಜೆಪಿ ಸೇರ್ಪಡೆಗೊಂಡ ತೆನೆ ಹೊತ್ತ ಮುಖಂಡರು
ಟಿ.ನರಸೀಪುರ , ಶುಕ್ರವಾರ, 12 ಏಪ್ರಿಲ್ 2019 (20:37 IST)
ಲೋಕ ಸಮರ ತಾರಕಕ್ಕೇ ಏರಿರುವಂತೆ ಪ್ರಚಾರದ ಭರಾಟೆಯ ನಡುವೆಯೇ ಪಕ್ಷಾಂತರ ಪರ್ವವೂ ಮುಂದುವರಿದಿದೆ.

ಚಾಮರಾಜನಗರ ಲೋಕಸಭಾ ಚುನಾವಣೆ ಕಣದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಶುರುವಾಗಿದೆ.
ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ್ದಾರೆ ಕುರುಬ ಸಮುದಾಯ ಮುಖಂಡರು. 

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಮುಸುವಿನಕೊಪ್ಪಲು ಗ್ರಾಮದ ಮುಖಂಡರು ಬಿಜೆಪಿಯತ್ತ ಮುಖಮಾಡಿದ್ದಾರೆ.  

webdunia
ಬಿಜೆಪಿ ಮುಖಂಡ ಸಿ.ಬಸವೇಗೌಡ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ನಟರಾಜು ನೇತೃತ್ವದಲ್ಲಿ ಕಮಲ ಪಡೆ ಸೇರಿದ ಜೆಡಿಎಸ್ ಮುಖಂಡರು ಬಿಜೆಪಿ ಧ್ವಜ ಹಿಡಿದುಕೊಂಡ್ರು.  

ಮೈತ್ರಿ ಪಕ್ಷಕ್ಕೆ ಟಿ.ನರಸೀಪುರ ದಲ್ಲಿ ಶಾಕ್ ನೀಡಲು ಮುಂದಾದ ಬಿಜೆಪಿ ನಡೆ ಚರ್ಚೆಗೆ ಕಾರಣವಾಗಿದೆ. 




Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಪ್ರಧಾನ ಅಲ್ಲ, ಪ್ರಚಾರದ ಮಂತ್ರಿಯಂತೆ!