Select Your Language

Notifications

webdunia
webdunia
webdunia
webdunia

ಗಂಗಾವತಿಗೆ ಆಗಮಿಸುತ್ತಿದ್ದ ಪ್ರಧಾನಿ ಮೋದಿಗೆ ಹನುಮಮಾಲಾಧಾರಿಗಳಿಂದ ಭರ್ಜರಿ ಗಿಫ್ಟ್. ಏನದು ಗೊತ್ತಾ?

ಗಂಗಾವತಿಗೆ ಆಗಮಿಸುತ್ತಿದ್ದ ಪ್ರಧಾನಿ ಮೋದಿಗೆ  ಹನುಮಮಾಲಾಧಾರಿಗಳಿಂದ ಭರ್ಜರಿ ಗಿಫ್ಟ್. ಏನದು ಗೊತ್ತಾ?
ಗಂಗಾವತಿ , ಶುಕ್ರವಾರ, 12 ಏಪ್ರಿಲ್ 2019 (12:11 IST)
ಗಂಗಾವತಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಗಂಗಾವತಿಗೆ ಆಗಮಿಸುತ್ತಿದ್ದ ಪ್ರಧಾನಿ ಮೋದಿಗೆ ಹನುಮಮಾಲಾಧಾರಿಗಳಿಂದ ಭರ್ಜರಿ ಗಿಫ್ಟ್ ಸಿದ್ಧವಾಗಿದೆ.


ಹೌದು. ಇಂದು ಪ್ರಧಾನಿ ನರೇಂದ್ರ ಮೋದಿ ಗಂಗಾವತಿಗೆ ಅಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದ್ದು, ಸಂಸದ ಸಂಗಣ್ಣ ಕರಣಿ ಪರ ಪ್ರಧಾನಿ ಮೋದಿ ಮತಯಾಚನೆ ಮಾಡಲಿದ್ದಾರೆ.


ಆ ವೇಳೆ ಹನುಮಮಾಲಾಧಾರಿಗಳು ಅವರಿಗೆ ಹನುಮನ ಬೆಳ್ಳಿ ಗದೆ ಗಿಫ್ಟ್ ಕೊಡಲು ಸಿದ್ದತೆ ನಡೆಸಿದ್ದಾರೆ. ಈ ಬೆಳ್ಳಿ ಗದೆ 1,650 ಗ್ರಾಂ ತೂಕವಿದ್ದು, ಇದನ್ನು ಕೊಲ್ಲಾಪುರದಲ್ಲಿ ಸಿದ್ಧಪಡಿಸಲಾಗಿದೆ. ಗಂಗಾವತಿ ಅಂಜನಾದ್ರಿ ಪರ್ವತದಲ್ಲಿ ಪ್ರಧಾನಿ ಮೋದಿ ಗೆದ್ದು ಬರಲಿ ಎಂದು ಹನುಮ ಮಾಲಾಧಾರಿಗಳು ಗದೆಗೆ ವಿಶೇಷ ಪೂಜೆ ಮಾಡಿಸಿ ಬಳಿಕ ಮೋದಿಗೆ ನೀಡಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬೇಡ್ಕರ್ ಜಯಂತಿಗೂ ಮೊದಲೇ ಸಂವಿಧಾನ ಶಿಲ್ಪಿಗೆ ಅವಮಾನ