ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರ ತಾಯಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ರು.ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ತುಂಬಾ ಬೇಸರದ ವಿಚಾರ ಇದು.ನರೇಂದ್ರ ಮೋದಿ ಸಿಎಂ ಆಗಿದ್ದಾಗ ತಾಯಿಗೆ ತೋರಿಸಿರೋ ಪ್ರೀತಿ ಮತ್ತು ಅವರ ತಾಯಿ ಮೋದಿಜಿಗೆ ತೋರಿಸಿದ ಮಮತೆ ನಾವೆಲ್ಲಾ ನೋಡೋಕೆ ಅವಕಾಶ ಸಿಕ್ಕಿತ್ತು.ಮೋದಿಜಿ ಕೂಡ ಹೇಳಿದ್ರು.ನಮ್ಮ ತಾಯಿ ಸರಳ ಮತ್ತು ವಿಶೇಷ ಅಂತಾ.ಮೋದಿಜಿ ಮತ್ತು ಅವರ ತಾಯಿ ಸಂಬಂಧ ದೇಶಕ್ಕೆ ಒಂದು ರೀತಿ ಆದರ್ಶ.ಈ ವಯಸ್ಸಲ್ಲೂ ಅವರು ತಮ್ಮ ಮಗನಿಗೆ ತಾಯಿಯ ಕರ್ತವ್ಯ ಮೆರೆದಿದ್ದಾರೆ.ಆ ತಾಯಿಯ ಮದರ್ಹುಡ್ ಏನು ಅನ್ನೋದನ್ನ ತೋರಿಸುತ್ತೆ.ಮೋದಿಜಿಯವರಿಗೆ ದೇಶಭಕ್ತಿಯನ್ನ ತುಂಬಿಕೊಟ್ಟಿದ್ದಾರೆ.ಇವತ್ತು ಅದನ್ನ ನಾವು ಮೋದಿಯವರಲ್ಲಿ ನೋಡ್ತೀವಿ.ಮೋದಿಜಿ ಅವರನ್ನ ಭೇಟಿ ಆದಾಗ ಊಟ ಮಾಡಿಸಿದ್ದಾರೆ.
ಅವರ ಕರ್ತವ್ಯ ಮರೆತಿರಲಿಲ್ಲ.ಮೋದಿಜಿ ಕೂಡ ಅವರ ತಾಯಿಗೆ ತೋರಿದ ಗೌರವ.ಅವರ ಜೊತೆ ನಡೆದುಕೊಂಡ ಆದರ್ಶ ಇಡೀ ದೇಶಕ್ಕೆ ಮಾದರಿ.ತಾಯಿ ಮಕ್ಕಳು, ಅಣ್ಣ ತಮ್ಮಂದಿರ ಸಂಬಂಧ ನಮ್ಮ ದೇಶದ ಒಂದು ಸಂಸ್ಕೃತಿ.ಮೋದಿಜಿ ಅವರ ತಾಯಿ ತಮ್ಮ ಕರ್ತವ್ಯ ಮುಗಿಸಿ ಆದರ್ಶವಾಗಿದ್ದಾರೆ.ಮೋದೀಜಿ ಕೂಡ ಅವರ ಕರ್ತವ್ಯ ಮಾಡ್ತಿದ್ದಾರೆ.ಮೋದಿಜಿ ಒಮ್ಮೆ ಕರ್ಮಯೋಗಿ ಬಗ್ಗೆ ಹೇಳಿದ್ರು.ಈಗ ಮೋದಿಜಿ ಕೂಡ ಓರ್ವ ಕರ್ಮಯೋಗಿ.ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳೋ ಶಕ್ತಿ ಕೊಡಲಿ ಎಂದು ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ರು.