Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಅಭಿವೃದ್ಧಿ ಮಂತ್ರ ಪಠಿಸಿದ ಸಿಎಂ ಬೊಮ್ಮಯಿ….!

ಬೆಂಗಳೂರಿನ ಅಭಿವೃದ್ಧಿ ಮಂತ್ರ ಪಠಿಸಿದ ಸಿಎಂ ಬೊಮ್ಮಯಿ….!
bangalore , ಶುಕ್ರವಾರ, 17 ಫೆಬ್ರವರಿ 2023 (20:41 IST)
ರಾಜ್ಯ ಬಜೆಟ್ ನಲ್ಲಿ ಬೆಂಗಳೂರಿಗೆ ಹಲವು ಅನುದಾನಗಳು ಘೋಷಣೆಯಾಗಿದ್ದು ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿದೆ. ರೈಲ್ವೆ, ಸಾರಿಗೆ ನಿಗಮಗಳಲ್ಲಿ ಕೆಲ ಬದಲಾವಣೆ,  ಕೈಗಾರಿಕೆಗಳಿಗೆ ಸೌಲಭ್ಯ , ಬಿಬಿಎಂಪಿ ಅಭಿವೃದ್ಧಿ , ಉತ್ತಮ ಆರೋಗ್ಯ ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ಇದು ಪೂರಕವಾಗಿದ್ದು ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ 10 ಸಾವಿರ  ಕೋಟಿ ಮೀಸಲಿಡಲಾಗಿದೆ.

ಬಜೆಟ್ನಲ್ಲಿ ಬೆಂಗಳೂರಿಗೆ ಏನೇನ್ ಸಿಕ್ತು? 
 
-ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ
 
-6000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಷ್ಠಾನ
 
-ಚರಂಡಿ & ಕಲ್ವರ್ಟ್ಗಳ ಅಭಿವೃದ್ಧಿಗೆ 1,813 ಕೋಟಿ
 
-ಪ್ರವಾಹ ನಿಯಂತ್ರಣಕ್ಕೆ 3000 ಕೋಟಿ.ರೂ ಯೋಜನೆ
 
-BBMP ವ್ಯಾಪ್ತಿಯ 110 ಗ್ರಾಮಗಳ ಕುಡಿವ ನೀರಿಗೆ 200 ಕೋಟಿ
 
-ಪ್ರತಿ ವಾರ್ಡ್ಗೆ ಅತ್ಯಾಧುನಿಕ ವಾಸನೆ ರಹಿತ ತ್ಯಾಜ್ಯ ಸಂಸ್ಕರಣಾ ಕೇಂದ್ರ
 
-ಮಾರ್ಕೆಟ್, ಕಾಂಪ್ಲೆಕ್ಸ್, ಜನನಿಬಿಡ ಪ್ರದೇಶಗಳಲ್ಲಿ SHE ಟಾಯ್ಲೆಟ್
 
-ಕೆಂಪೇಗೌಡ ಏರ್ಪೋರ್ಟ್ ಬಳಿ ಸ್ಟಾರ್ಟ್ಅಪ್ ಪಾರ್ಕ್
 
-ವೈದ್ಯಕೀಯ ಕಾಲೇಜಿನಲ್ಲಿ ಕೇಂದ್ರೀಕೃತ ರಕ್ತನಿಧಿ ವ್ಯವಸ್ಥೆ
 
-ಬೆಂಗಳೂರಿನ ವೈದ್ಯಕೀಯ ಸಂಸ್ಥೆಯಲ್ಲಿ IVF ಕ್ಲಿನಿಕ್ ಸ್ಥಾಪನೆ
 
-ದೇವನಹಳ್ಳಿ ಅಂಬೇಡ್ಕರ್ ಕೌಶಲ್ಯ ಕೇಂದ್ರಕ್ಕೆ 2 ಕೋಟಿ
 
-ಬೆಂಗಳೂರಿನಲ್ಲಿ ಸಾಂಕ್ರಾಮಿಕ ಕೇಂದ್ರ ಸ್ಥಾಪನೆಗೆ 10 ಕೋಟಿ
 
-ಬೆಂಗಳೂರು ಟ್ರಾಫಿಕ್ ಕಂಟ್ರೋಲ್ಗೆ 150 ಕೋಟಿ
 
-75 ಟ್ರಾಫಿಕ್ ಜಂಕ್ಷನ್ ಅಭಿವೃದ್ಧಿಗೆ 150 ಕೋಟಿ
 
-ಟಿನ್ ಫ್ಯಾಕ್ಟರಿ-ಮೇಡಹಳ್ಳಿ ವರೆಗೆ ಎಕಿವೇಟೆಡ್ ರಸ್ತೆ ನಿರ್ಮಾಣ
 
-ಯಶವಂತಪುರ-ಮತ್ತಿಕೆರೆ-BEL ವರೆಗೆ ಇಂಟಿಗ್ರೇಟೆಡ್ ಫ್ಲೈಓವರ್
 
-120 ಕಿ. ಮೀಟರ್ ರಸ್ತೆಗೆ ಈ ವರ್ಷ ವೈಟ್ ಟಾಪಿಂಗ್
 
-300 ಕಿ.ಮೀ ಆರ್ಟೀರಿಯಲ್ ರಸ್ತೆ ಅಭಿವೃದ್ಧಿಗೆ 450 ಕೋಟಿ
 
-BBMPಯ ಹೊಸ ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ 300 ಕೋಟಿ
 
-SMVT ರೈಲ್ವೇ ನಿಲ್ದಾಣ ಪ್ರದೇಶ ಅಭಿವೃದ್ಧಿಗೆ 300 ಕೋಟಿ
 
-ಸಾರಿಗೆ ಸಮಸ್ಯೆ ಪರಿಹಾರಕ್ಕೆ ಮಹಾನಗರ ಭೂಸಾರಿಗೆ ಪ್ರಾಧಿಕಾರ ರಚನೆ
 
ರಾಜ್ಯ ಬಜೆಟ್ ನಲ್ಲಿ ರಾಜ್ಯ ರಾಜಧಾನಿಗೆ ಉತ್ತಮ ಅನುದಾನಗಳು ಸಿಕ್ಕಿದೆ ಅಂದ್ರೆವ ತಪ್ಪಾಗಲ್ಲ. ಯಾಕಂದ್ರೆ ಹಲವು ವರ್ಷಗಳಿಂದ ಕಾರ್ಯರೂಪಕ್ಕೆ ಬಾರದೇ ಇರುವ ಹಲವು ಯೋಜನೆಗಳಿಗೆ ಈಗ ಮರು ಜೀವ ಬಂದಂತಾಗಿದ್ದು, ಬೆಂಗಳೂರಿನ ದೃಷ್ಟಿಯಲ್ಲಿ  ಸಾರಿಗೆ ವ್ಯವಸ್ಥೆ, ಶೈಕ್ಷಣಿಕ ಕ್ಷೇತ್ರ, ಕಾರ್ಮಿಕರಿಗೆ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸೇವೆಗಳು , ವಾರ್ಡ್ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಲಿವೆ.ಒಟ್ನಲ್ಲಿ ದಿನೇ ದಿನೇ ಬೆಳೆಯುತ್ತಿರುವ ಬೆಂಗಳೂರು ಈ ಬಜೆಟ್ ನಿಂದ ಕೂಡ ಮತ್ತಷ್ಟು ಅಭಿವೃದ್ಧಿಯತ್ತಾ  ಸಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ ನಲ್ಲಿ ಎಣ್ಣೆ ಕೊಡೋದ ತಡ..ಸಪ್ಲೈಯರ್ ಮೇಲೆ ಹಲ್ಲೆ