Publish Date: Thu, 06 Feb 2020 (21:38 IST)
Updated Date: Thu, 06 Feb 2020 (21:40 IST)
ಸಿಬಿಐ ಅಧಿಕಾರಿಗಳು ಒಂದಂಕಿ ಲಾಟರಿ ಕೇಸ್ ನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಗೆ ಕ್ಲೀನ್ ಚಿಟ್ ನೀಡಿದೆ.
ಈ ಕೇಸ್ ನಲ್ಲಿ ಐಪಿಎಸ್ ಅಧಿಕಾರಿಗಳಿಬ್ಬರಿಗೆ ಕ್ಲೀನ್ ಚಿಟ್ ನೀಡಲಾಗಿದ್ದರೆ, ಪ್ರಮುಖ ಆರೋಪಿಯಾಗಿದ್ದ ಪಾರಿರಾಜನ್ ವಿರುದ್ಧದ ಕೇಸ್ ಹಿಂದಕ್ಕೆ ಪಡೆಯಲಾಗಿದೆ.
ಸುಳ್ಳು ಕೇಸ್ ದಾಖಲು ಮಾಡಿರೋ ಪೊಲೀಸ್ ಅಧಿಕಾರಿಗಳು ಹಾಗೂ ನಿವೃತ್ತ ಐಜಿಪಿ ಪದ್ಮನಯನ ಸೇರಿದಂತೆ ಇತರ 11 ಮಂದಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.