Publish Date: Thu, 07 Nov 2019 (18:46 IST)
Updated Date: Thu, 07 Nov 2019 (18:48 IST)
ಬೆಂಗಳೂರು: ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿರುವ ರಾಜ್ಯ ಕ್ರಿಕೆಟಿಗರಾದ ಸಿಎಂ ಗೌತಮ್ ಮತ್ತು ಅಬ್ರಾರ್ ಖಾಜಿಗೆ ಈಗ ಅಜೀವ ನಿಷೇಧದ ಭೀತಿ ಎದುರಾಗಿದೆ.
ಮ್ಯಾಚ್ ಫಿಕ್ಸಿಂಗ್ ಕಳಂಕಕ್ಕೆ ತುತ್ತಾಗಿರುವ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಕೆಪಿಎಲ್ ಟೂರ್ನಿಯಿಂದ ರದ್ದುಗೊಳಿಸಲಾಗಿದೆ. ಬಂಧಿತ ಕ್ರಿಕೆಟಿಗರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಇನ್ನು ಏಳು ದಿನ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರ ವಶದಲ್ಲಿರಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್ ಸಿಎ ಬಂಧಿತ ಕ್ರಿಕೆಟಿಗರ ಮೇಲಿನ ಆರೋಪ ಪಟ್ಟಿಯನ್ನು ನೋಡಿಕೊಂಡು ಯಾವ ಮಟ್ಟಿಗೆ ಶಿಕ್ಷೆ ನೀಡಬೇಕೆಂದು ತೀರ್ಮಾನಿಸಲಾಗುವುದು. ಇಂತಹ ಕಳಂಕವನ್ನು ನಾವು ಸಹಿಸಲ್ಲ. ಖಂಡಿತಾ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದೆ.
Krishnaveni K
Publish Date: Thu, 07 Nov 2019 (18:46 IST)
Updated Date: Thu, 07 Nov 2019 (18:48 IST)