Publish Date: Thu, 07 Nov 2019 (10:36 IST)
Updated Date: Thu, 07 Nov 2019 (10:38 IST)
ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ಕಾಮೆಂಟರಿ ಮಾಡಲಿದ್ದಾರೆ ಎಂಬ ವರದಿಯಿತ್ತು.
ಆದರೆ ಧೋನಿ ಕಾಮೆಂಟರಿಗೆ ಬಿಸಿಸಿಐ ಬ್ರೇಕ್ ಹಾಕುವ ಸಾಧ‍್ಯತೆಯಿದೆ. ಧೋನಿ ಕಾಮೆಂಟರಿ ಮಾಡುವುದಕ್ಕೆ ಸ್ವ ಹಿತಾಸಕ್ತಿ ಸಂಘರ್ಷ ಅಡ್ಡಿ ಬರುತ್ತಿದೆ.
ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಧೋನಿ ಕಾಮೆಂಟರಿಗೆ ಬಿಸಿಸಿಐ ಒಪ್ಪಿಗೆ ಕೇಳಿದೆ. ಆದರೆ ಧೋನಿ ಇನ್ನೂ ಬಿಸಿಸಿಐ ಗುತ್ತಿಗೆ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಕಾಮೆಂಟರಿ ಮಾಡಿದರೆ ಸ್ವ ಹಿತಾಸಕ್ತಿ ಸಂಘರ್ಷಕ್ಕೆಡೆಯಾಗುತ್ತದೆ. ಇದರಿಂದಾಗಿ ಬಿಸಿಸಿಐ ಧೋನಿ ಕಾಮೆಂಟರಿಗೆ ಒಪ್ಪಿಗೆ ನೀಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ.