Daily Horoscope
✕

ಸಿಜೆ ರಾಯ್ ಮರಣೋತ್ತರ ವರದಿಯಲ್ಲಿ ಶಾಕಿಂಗ್ ವಿಚಾರಗಳು ಬಹಿರಂಗ

Krishnaveni K
ಶನಿವಾರ, 31 ಜನವರಿ 2026 (13:51 IST)
Photo Credit: X
ಬೆಂಗಳೂರು: ಕಾನ್ಫಿಡೆನ್ಸ್ ಗ್ರೂಪ್ ಸಂಸ್ಥೆಯ ಮಾಲಿಕ ಸಿಜೆ ರಾಯ್ ಮರಣೋತ್ತರ ಪರೀಕ್ಷೆ ವರದಿಗಳು ಹೊರಬಂದಿದ್ದು ಶಾಕಿಂಗ್ ವಿಚಾರಗಳು ಬಯಲಾಗಿವೆ.

ಐಟಿ ದಾಳಿ ಬೆನ್ನಲ್ಲೇ ಒತ್ತಡಕ್ಕೊಳಗಾಗಿದ್ದ ಸಿಜೆ ರಾಯ್ ನಿನ್ನೆ ತಮ್ಮ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪ್ರಾಥಮಿಕ ವರದಿಗಳು ಹೊರಬಂದಿವೆ.

ಅದರ ಪ್ರಕಾರ ಸಿಜೆ ರಾಯ್ ತಮ್ಮ ಎದೆಯ ಎಡಭಾಗಕ್ಕೆ ಸಮೀಪದಿಂದಲೇ ಗನ್ ಹಿಡಿದುಕೊಂಡು ಫೈರ್ ಮಾಡಿದ್ದಾರೆ. ಇದರಿಂದಾಗಿ ಮಾಂಸಖಂಡಗಳು ಚದುರಿಲ್ಲ. ಎದೆಯ ಎಡಭಾಗದ ಮೂಲಕ ಪ್ರವೇಶಿಸಿದ ಗುಂಡು ಬೆನ್ನಿನ ಭಾಗದಲ್ಲಿ ಸಿಲುಕಿಕೊಂಡಿದೆ. 

ಪಾಕೆಟ್ ಗನ್ ನಿಂದ ಅವರು ತಮ್ಮನ್ನು ತಾವು ಶೂಟ್ ಮಾಡಿಕೊಂಡಿದ್ದಾರೆ. ಅತೀ ಹತ್ತಿರದಿಂದ ಗುಂಡು ಹೊಡೆದುಕೊಂಡಿರುವುದರಿಂದ ಗುಂಡು ಆಳಕ್ಕೆ ಇಳಿದಿದೆ. ಶ್ವಾಸಕೋಶ, ಹೃದಯವನ್ನು ಹೊಕ್ಕು ಬೆನ್ನಿನಲ್ಲಿ ಸಿಲುಕಿಕೊಂಡಿದೆ. ಸಿಜೆ ರಾಯ್ ತಮ್ಮ ಪರವಾನಗಿ ಪಡೆದ ಎನ್ ಪಿ ಬೋರ್ 0.25 ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಗನ್ ಹೊರತೆಗೆಯಲಾಗಿದ್ದು ವಿಧಿ ವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments