Select Your Language

Notifications

webdunia
webdunia
webdunia
webdunia

ಚಿತ್ರದುರ್ಗ: ಮದುವೆ ಊಟ ಮಾಡಿದ 39ಕ್ಕೂ ಅಧಿಕ ಮಂದಿ ಅಸ್ವಸ್ಥ

Food Poison

Sampriya

ದಾವಣಗೆರೆ , ಶನಿವಾರ, 11 ಮೇ 2024 (16:37 IST)
Photo Courtesy X
ದಾವಣಗೆರೆ:  ಮದುವೆ ಊಟ ಸೇವನೆ ಮಾಡಿದ 30ಕ್ಕೂ ಅಧಿಕ ಮಂದಿಗೆ ವಾಂತಿ ಭೇದಿಯಾಗಿ ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕಾಲಗೇರೆ ಗ್ರಾಮದಲ್ಲಿ ನಡೆದಿದೆ.

ಕಾಲಗೇರೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡಿದ ಮಂದಿಗೆ ರಾತ್ರಿ ವೇಳೆಗೆ ವಾಂತಿ ಭೇದಿಯಿಂದ ಜನರು ಬಳಲಿದ್ದಾರೆ.  

ಕೂಡಲೇ ಭರಮಸಾಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಅಸ್ವಸ್ಥರು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮದುವೆ ಊಟದಲ್ಲಿ ಫುಡ್​ ಪಾಯಿಸನ್​ ಆಗಿರುವ ಶಂಕೆ ವ್ಯಕ್ತವಾಗಿದ್ದು, ಯಾವುದೇ ಪ್ರಾಣಪಾಯವಾಗಿಲ್ಲ. ಈ ಘಟನೆ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಕಾಲಿಗೆ ಬಿದ್ದು ನಮಸ್ಕರಿಸಿದ ಪ್ರತಾಪ್ ಸಿಂಹ