Publish Date: Wed, 17 Jun 2020 (19:08 IST)
Updated Date: Wed, 17 Jun 2020 (19:09 IST)
ಚೀನಾ ದೇಶವು ತನ್ಮ ಆಕ್ರಮಣಕಾರಿ ಪ್ರವೃತಿ ಕೈಬಿಡಬೇಕು ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
ಚಿತ್ರದುರ್ಗ ಲೋಕಸಭಾ ಸಂಸದ ನಾರಾಯಣಸ್ವಾಮಿ, ಭಾರತ ಮತ್ತು ಚೀನಾ ನಡುವೆ ಗಡಿ ಘರ್ಘಣೆಗೆಗೆ ಸಂಬಂಧಿಸಿದ ಹೇಳಿಕೆ ನೀಡಿದ್ದಾರೆ.
ಭಾರತವು ವಿಶ್ವದ ಯಾವುದೇ ದೇಶವನ್ನು ಎದುರಿಸುವ ಶಕ್ತಿ ಹೊಂದಿದೆ. ಪ್ರಧಾನಿ ಮೋದಿ ಈ ಮೊದಲೇ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಮಾತನಾಡಿದ್ದಾರೆ.
ಭಾರತದ ಸೇನೆ ಯಾವುದೇ ದೇಶದ ಸೇನೆಯನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿದೆ. ಭಾರತ ಶಾಂತಿ ಮಂತ್ರ ಹೊಂದಿರೋ ದೇಶ ವಿಶ್ವವು ಶಾಂತಿಯಿಂದ ಇರಲಿ ಎಂದು ಆಶಿಸುತ್ತದೆ. ಆದ್ರೆ ಇದಕ್ಕೆ ವಿರುದ್ಧವಾಗಿ ನಡೆದುಕೊಂಡ್ರೆ ಅದಕ್ಕೆ ಸರಿಯಾದ ಉತ್ತರ ನೀಡಲಾಗುವುದು ಎಂದಿದ್ದಾರೆ.
ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದರೆ ಅವರು ಅಡ್ವಾನ್ಸ್ ಆಗಿ ಯೋಚನೆ ಮಾಡ್ತಾ ಇದ್ದಾರೆ ಎಂದರ್ಥ ಎಂದು ಹೇಳಿದ್ದಾರೆ.
Jagadeesh
Publish Date: Wed, 17 Jun 2020 (19:08 IST)
Updated Date: Wed, 17 Jun 2020 (19:09 IST)