Publish Date: Tue, 29 Aug 2017 (15:41 IST)
Updated Date: Tue, 29 Aug 2017 (15:44 IST)
ಜನರನ್ನು ವಂಚಿಸಿ ಹಣ ಕೀಳುತ್ತಿದ್ದ ವಂಚಕಿ ಮೊಬೈಲ್ ಮಾಲಾ ಪೊಲೀಸರ ಅತಿಥಿಯಾಗಿದ್ದಾಳೆ.
ತನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿ ಶ್ರೀಮಂತರನ್ನು ಪರಿಚಯಿಸಿಕೊಳ್ಳುತ್ತಿದ್ದ ಮಾಲಾ ಅವರಿಂದ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ನಂತರ ಅವರಿಗೆ ಮೊಬೈಲ್ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಸುತ್ತಿದ್ದಳು ಎನ್ನಲಾಗಿದೆ.
ಮಾಲಾಳ ಸೌಂದರ್ಯ ಸವಿಯುವ ಬಯಕೆಯಿಂದ ನಿರ್ಜನ ಪ್ರದೇಶಕ್ಕೆ ಬರುವ ಶ್ರೀಮಂತ ವ್ಯಕ್ತಿಯನ್ನು ಆಕೆಯ ಗೂಂಡಾಗಳು ಬೆದರಿಸಿ ಚೆಕ್ ಮೇಲೆ ಸಹಿಹಾಕಿಸಿಕೊಳ್ಳುತ್ತಿದ್ದರು. ನಂತರ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಬಂದ ನಂತರ ಬಿಡುಗಡೆ ಮಾಡುತ್ತಿದ್ದರು.
ಮಾಲಾಳ ವಂಚನೆಯ ಜಾಲಕ್ಕೆ ಬಿದ್ದ ವ್ಯಕ್ತಿಯೊಬ್ಬ ನಗರದ ಪೊಲೀಸ್ ಠಾಣೆಗೆ ತೆರಳಿ ಆಕೆಯ ವಿರುದ್ಧ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಾಲಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.