Select Your Language

Notifications

webdunia
webdunia
webdunia
webdunia

ಸ್ವಯಂಘೋಷಿತ ದೇವಮಾನವ ರಾಮಪಾಲ್`ಗೆ 2 ಪ್ರಕರಣಗಳಲ್ಲಿ ರಿಲೀಫ್

ಸ್ವಯಂಘೋಷಿತ ದೇವಮಾನವ ರಾಮಪಾಲ್`ಗೆ 2 ಪ್ರಕರಣಗಳಲ್ಲಿ ರಿಲೀಫ್
ಹಿಸಾರ್ , ಮಂಗಳವಾರ, 29 ಆಗಸ್ಟ್ 2017 (15:33 IST)
ಹರ್ಯಾಣದ ಮತ್ತೊಬ್ಬ ಸ್ವಯಂಘೋಷಿತ ದೇವಮಾನವ ರಾಮ್ ಪಾಲ್`ಗೆ ಎರಡು ಪ್ರಕರಣಗಳಲ್ಲಿ ಹರ್ಯಾಣದ ಹಿಸಾರ್ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. 2014ರ ಗಲಭೆ ಮತ್ತು ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದ ಆರೋಪ ಪ್ರಕರಣಗಳಲ್ಲಿ ರಾಮ್ ಪಾಲ್ ಖುಲಾಸೆಯಾಗಿದ್ದಾರೆ.
 

 ಆದರೆ, ರಾಮ್ ಪಾಲ್ ಈಗಲೇ ಜೈಲಿನಿಂದ ಹೊರ ಹೋಗುವುದು ಸಾಧ್ಯವಿಲ್ಲ. ದೇಶದ್ರೋಹ, ಕೊಲೆ ಸೇರಿದಂತೆ ಹಲವು ಪ್ರಕರಣಗಳು ರಾಮ್ ಪಾಲ್ ವಿರುದ್ಧ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ನವೆಂಬರ್ 18, 2014ರಂದು ರಾಮ್ ಪಾಲ್ ವಿರುದ್ಧ ಐಪಿಸಿ ಸೆಕ್ಷನ್ಸ್ 186, 332 ಮತ್ತು 353ರ ಅಡಿ ಪ್ರಕರಣ ದಾಖಲಾಗಿತ್ತು.  ಹಿಸಾರ್ ಸೆಂಟ್ರಲ್ ಜೈಲಿನಲ್ಲಿ ಸ್ಥಾಪಿಸಲಾಗಿರುವ ವಿಶೇಷ ಕೋರ್ಟ್`ನಲ್ಲಿ ವಿಚಾರಣೆ ನಡೆದಿದೆ. ಕೋರ್ಟ್`ನಲ್ಲಿ ರಾಮ್ ಪಾಲ್ ವಿಚಾರಣೆಗೆ ಬಂದಾಗಲೆಲ್ಲ ಅಪಾರ ಪ್ರಮಾಣದಲ್ಲಿ ಸೇರುವ ಬೆಂಬಲಿಗರು ಗಲಾಟೆ ಮಾಡುತ್ತಾರೆ. ಹೀಗಾಗಿಯೇ, ಈ ಬಾರಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು.

ಆಗಸ್ಟ್ 24ರಂದೇ ಈ ಎರಡೂ ಪ್ರಕರಣಗಳ ತೀರ್ಪು ಹೊರಬೀಳಬೇಕಿತ್ತು. ಆದರೆ, ಆಗಸ್ಟ್ 25ಕ್ಕೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಪ್ರಕರಣದ ತೀರ್ಪು ಸಿಬಿಐ ಕೋರ್ಟ್`ನಲ್ಲಿ ನಿಗದಿಯಾಗಿದ್ದರಿಂದ ಪೊಲೀಸರ ಮನವಿ ಮೇರೆಗೆ ತೀರ್ಪನ್ನ ಇಂದಿಗೆ ಮುಂದೂಡಲಾಗಿತ್ತು. ರಾಮಪಾಲ್ ವಿರುದ್ಧ ಇನ್ನೂ ಎರಡು ಪ್ರಕರಣಗಳು ಬಾಕಿ ಉಳಿದಿದ್ದು, ಸದ್ಯ ಜೈಲಿನಲ್ಲೇ ಇರಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಪಕ್ಷದಿಂದ ಹೊರಗೆ: ಜಿ.ಪರಮೇಶ್ವರ್